ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಾಗ್ರಿ ಕಳಿಸಿದ ಸುಧಾಮೂರ್ತಿ

Advt_NewsUnder_1
Advt_NewsUnder_1

ಬೆಳ್ತಂಗಡಿ:  ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿ ಮಾಡಿದ  36 ಗಂಟೆಗಳಲ್ಲಿ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಜಿಲ್ಲೆಗೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.

ಮಹಾಮಾರಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಈ ಅಗತ್ಯ ಸಾಮಾಗ್ರಿಗಳು ಮಂಗಳೂರಿಗೆ ತಲುಪಿದೆ.

ಇನ್ಫೋಸಿಸ್ ಫೌಂಡೇಶನ್ ನಿಂದ ಬಂದ ವೈದ್ಯಕೀಯ ಸಾಮಾಗ್ರಿಗಳು:
1,65000 ಮಾಸ್ಕ್
5,000 ಬಾಟಲ್ ಸ್ಯಾನಿಟೈಸರ್ (500 ML)
85 ಗಾಗಲ್ಸ್
03 ಬ್ಲಾಕ್ ಸರ್ಜಿಕಲ್ ಗ್ಲೌಸ್
50 ಕ್ಯಾಪ್ ಗಳು
30 ಪೂರ್ತಿ ಕಾಲು ಮುಚ್ಚುವಂತ ವೈದ್ಯಕೀಯ ವಸ್ತುಗಳು
2000 ಎನ್ 95″ ಮಾಸ್ಕ್
300 ಫಾಗ್ ಫ್ರೀ ಮಾಸ್ಕ್
60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್ ಗಳು ಒಳಗೊಂಡಿದೆ.

ಮಂಗಳೂರು ಪೊಲೀಸ್ ಆಯುಕ್ತರಿಂದ ಟ್ವೀಟ್:
ಇನ್ಫೋಸಿಸ್ ಫೌಂಡೇಶನ್‍ನ ಸುಧಾ ಮೂರ್ತಿ ಅವರು ಕಳುಹಿಸಿಕೊಟ್ಟ ವೈದ್ಯಕೀಯ ಸಾಮಾಗ್ರಿಗಳು ಮಂಗಳೂರಿಗೆ ತಲುಪಿವೆ. ನಿಮಗೆ ಧನ್ಯವಾದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿ.ಎಸ್. ಹರ್ಷ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಸುಧಾಮೂರ್ತಿ ಅವರು ಸ್ಪಂದಿಸಿದ್ದಾರೆ. ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮೇಡಂ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‍ನ ರಾಮದಾಸ್ ಕಾಮತ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿರುವ ಸುಧಾ ಮೂರ್ತಿ ಅವರಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.