ಉಜಿರೆ: ಸಾಮಾಗ್ರಿಗಳ ಖರೀದಿಗೆ ಬಂದವರಿಂದಲೇ ಉಗುಳಿ ಮಲಿನ!

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಸ್ವಚ್ಛತೆ ಬಗ್ಗೆ ಕೆಲವು ಸಾರ್ವಜನಿಕರಿಗೆ ಇನ್ನೂ ಅರಿವಿಲ್ಲ ಎಂಬುದು ಕಳೆದ ಕೆಲವು ದಿನಗಳಿಂದ ಮಲಿನವಾದ ಉಜಿರೆಯ ಸಂಧ್ಯಾ ಟ್ರೇಡರ್ಸ್ ಅಂಗಡಿಯ ಎದುರಿನ ಈ ಚಿತ್ರಣ ಬಿಂಬಿಸುತ್ತದೆ.

ಅಷ್ಟಕ್ಕೂ ಆಗಿದ್ದೇನು?
ದೇಶಾದ್ಯಂತ 21ದಿನಗಳ ಲಾಕ್ ಡೌನ್ ಆದೇಶದಿಂದ ಬೆಳ್ತಂಗಡಿ ತಾಲೂಕಿನಲ್ಲಿಯೂ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿದ್ದರಿಂದ ದಿನಸಿ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಬಂದ ಜನರು ಸಂಧ್ಯಾ ಟ್ರೇಡರ್ಸ್ ಎದುರು ಪಾನ್ ಮಸಾಲ, ಗುಟ್ಕಾ ಮುಂತಾದವುಗಳನ್ನು ತಿಂದು ಉಗುಳಿ ಸುತ್ತಲಿನ ಪರಿಸರವನ್ನು ಮಲಿನಗೊಳಿಸಿದ್ದಾರೆ.

ಬ್ಲೀಚಿಂಗ್ ಬಳಕೆ:
ಸಂಧ್ಯಾ ಟ್ರೇಡರ್ಸ್ ಎದುರಿನ ಅನೈರ್ಮಲ್ಯವನ್ನು ಹೋಗಲಾಡಿಸಲು ಐದು ಕ್ವಿಂಟಾಲ್ ಬ್ಲೀಚಿಂಗ್ ಪೌಡರ್ ಬಳಸಲಾಯಿತು.

ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಬಿ.ಜಿ., ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಹಾಗೂ ಸಂಧ್ಯಾ ಟ್ರೇಡರ್ಸ್ ಮಾಲಕರಾದ ರಾಜೇಶ್ ಪೈಯವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಕೊರೊನಾ ವೈರಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಎಲ್ಲೆಡೆ ಸ್ವಚ್ಛತೆ ಕಾಪಾಡುವುದು ಅಗತ್ಯವಿದೆ ಎಂಬುದು ನಮ್ಮ ಅರಿವಿಗೆ ಬರಬೇಕು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.