ತಾಲೂಕು ಆಡಳಿತ ಯಾವ ರಸ್ತೆಗೂ ಮಣ್ಣು ಹಾಕಿ ಬಂದ್ ಮಾಡಿಲ್ಲ; ಗಣಪತಿ ಶಾಸ್ತ್ರಿ ಸ್ಪಷ್ಟನೆ

Advt_NewsUnder_1
Advt_NewsUnder_1
Advt_NewsUnder_1

ಕುಪ್ಪೆಟ್ಟಿ; ಕರಾಯದ ವ್ಯಕ್ತಿಗೆ ಕೊರೊನಾ ಇರುವ ಬಗ್ಗೆ ದೃಢಪಟ್ಟಿರುವ ಬೆನ್ನಿಗೇ ಅಲ್ಲಿನ ಜನತಾ ಕಾಲನಿಯ ಮನೆಗಳವರು ಎಲ್ಲೂ ಹೊರ ಹೋಗದಂತೆ ಬ್ಯಾರಿಕೇಡ್ ಹಾಕಿದ್ದು ಬಿಟ್ಟರೆ 

ತಾಲೂಕು ಆಡಳಿತ ಯಾವ ರಸ್ತೆಗೂ ಮಣ್ಣು ಹಾಕಿ ಬಂದ್ ಮಾಡಿಲ್ಲ ಎಂದು ತಹಶಿಲ್ದಾರ್ ಗಣಪತಿ ಶಾಸ್ತ್ರಿ ಸ್ಪಷ್ಟನೆ‌ ನೀಡಿದ್ದಾರೆ.

ಸುದ್ದಿ‌ ವೆಬ್ ಸೈಟ್ ಮೂಲಕ‌ ವಿಚಾರ ನನ್ನ ಗಮನಕ್ಕೆ ಬಂದಿದ್ದು ನಮ್ಮ ಇಲಾಖಾ ಸಿಬ್ಮಂದಿಗಳ‌ ಮೂಲಕ‌ ಪೂರ್ಣ ವಿವರ ಪಡೆದು ತಕ್ಷಣ
ತೆರವಿಗೆ ಕ್ರಮ ವಹಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ‌ ಈ ಕೃತ್ಯ ಎಸಿಗಿದವರನ್ನು ಪತ್ತೆಹಚ್ಚಿ ಸೂಕ್ತ‌ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ‌ನೀಡಿದ್ದಾರೆ.

ಯಾರು ಕೂಡ ಈ ರೀತಿಯ ಕೃತ್ಯಗಳಿಗೆ ಮುಂದಾಗಬೇಡಿ, ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆಯಿರಿ.
ಜನತೆಗೆ ತೊಂದರೆ ಯಾಗುವ ಯಾವ ಅಡೆತಡೆಗಳನ್ನೂ ಮಾಡಬಾರದಾಗಿ ತಿಳಿಸಿದ್ದಾರೆ.

ಕರಾಯದಲ್ಲಿ ಕಂದಾಯ ಇಲಾಖೆಯೆ ಬ್ಯಾರಿಕೇಡ್ ಹಾಕಿಸಿ ಪೊಲೀಸ್ ಸರ್ಪಗಾವಲು ಹಾಕಿಸಿದೆ. ಅಲ್ಲಿನ‌ಜನತೆಗೆ ಆವಶ್ಯಕ ಸಾಧನ, ಔಷಧಿ ಬೇಕಾದರೆ ನಮ್ಮ ಇಲಾಖೆಯ ತಂಡವೇ ಸ್ಪಂದಿಸುತ್ತದೆ.
ಯಾರೂ ತಮ್ಮದೇ ಕ್ರಮಗಳನ್ನು ಜಾರಿಗೊಳಿಸಬೇಡಿ.‌ ಅಗತ್ಯ ಬಿದ್ದರೆ ಮಾತ್ರ ಇಲಾಖೆ ಜೊತೆ ನೆರವು ನೀಡಿ‌ ಎಂದಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.