HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ‌ ಪತ್ರಿಕಾ ವಿತರಣೆಗೆ ಅಡ್ಡಿಪಡಿಸಿದ ಪೊಲೀಸರು?!

ಉಜಿರೆ; ಮಾ. 28 ರಂದು  ಮುಂಜಾನೆ ಉಜಿರೆಯಲ್ಲಿ ದೈನಂದಿನ‌‌ ಪತ್ರಿಕೆ ವಿತರಣೆಗೆ ಪೊಲೀಸರೇ ಅಡ್ಡಿಪಡಿಸಿದ್ದಾರೆ ಎಂಬ ಅಪಾದನೆ ಕೇಳಿಬಂದಿದೆ.

ಯಾವಾಗಿನಂತೆ ಉಜಿರೆ ಪರಿಸರದಲ್ಲಿ ಮುಂಜಾನೆ ಪತ್ರಿಕಾ ವಿತರಕರು ಮುಂಜಾಗ್ರತಾ ಕ್ರಮ ಗಳೊಂದಿಗೆ ತಮ್ಮ ಜವಾಬ್ಧಾರಿಯುತ ಪತ್ರಿಕಾ ವಿತರಣೆ ಕರ್ತವ್ಯಕ್ಕೆ ಅಣಿಯಾಗುತ್ತಿರುವಂತೆ ಈ ಭಾಗದಲ್ಲಿ ಕರ್ತವ್ಯದಲ್ಲಿದ್ದ ಪೋಲಿಸರಿಂದ ಈ ಅಡ್ಡಿಪಡಿಸುವಿಕೆ ಆಗಿದೆ ಎಂಬುದು ದೊರೆತ‌ ಮಾಹಿತಿ.

ಆ ಕಾರಣದಿಂದ ತಾಲೂಕಿನ ಪ್ರಮುಖ ನಗರವಾದ ಉಜಿರೆಯಲ್ಲಿ ಸುಮಾರು 1200‌ ರಷ್ಟು ಪತ್ರಿಕೆಗಳು ವಿತರಣೆಯಾಗದೆ ಬಾಕಿಯಾಗಿದೆ ಎನ್ನಲಾಗಿದೆ.
ಈ‌ ಸಂಬಂಧ ಮೇಲಧಿಕಾರಿಗಳು ಈ ಬಗ್ಗೆ ತುರ್ತು ಸ್ಪಂದಿಸಿ‌ ಘಟನೆ ಮರುಕಳಿಸದಂತೆ ಕ್ರಮ‌ ವಹಿಸಬೇಕಾಗಿದೆ.

ಗುರುವಾಯನಕೆರೆ ಭಾಗದಲ್ಲಿ ಪತ್ರಿಕೆ, ಹಾಲು ವಿತರಣೆಗೂ ಅಡ್ಡಿ ಎಂಬ ದೂರು;

ಉಜಿರೆಯಲ್ಲಿ ಆಗಿರುವ ಪತ್ರಿಕಾ ವಿತರಣೆಗೆ ಅಡ್ಡಿ ಘಟನೆ ಬಗ್ಗೆ “ಸುದ್ದಿ” ವರದಿ ಪ್ರಸಾರ ವಾಗುತ್ತಿದ್ದಂತೆ ಇಂದು ಗುರುವಾಯನಕೆರೆ ಯಲ್ಲೂ ಕೂಡ ಇದೇ ರೀತಿ ಆಗಿದೆ ಎಂಬ ಆಪಾದನೆ ಕೇಳಿಬಂದಿದೆ.

ಇಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಲು‌ ಮತ್ತು ಪೇಪರ್ ವಿತರಣೆಗೆ ಅವಕಾಶ ನಿರಾಕರಿಸಿದ್ದಾರೆ ಎಂದು ನಿವೃತ್ತ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಪತ್ರಿಕೆ‌ ಮತ್ತು ಹಾಲು‌ ಅಗತ್ಯ ವಸ್ತುಗಳ ಪಟ್ಟಿಯಲ್ಲಿದ್ದು, ಅದಾಗ್ಯೂ ಕೂಡ ಮಾಹಿತಿ ಕೊರತೆಯಿಂದಲೋ ಅಥವಾ ಮೇಲಧಿಕಾರಿಗಳ ನಿರ್ದೇಶನವನ್ನು ತಪ್ಪಾಗಿ ಅರ್ಥಮಾಡಿಕೊಂಡಿರುವುದರೊಂದಲೋ ಇಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದ ಈ ರೀತಿ ತಡೆ ಆಗಿರುವ ಸಾಧ್ಯತೆ ಇದೆ.

ಆದ್ದರಿಂದ ಆಯಾಯಾ ವ್ಯಾಪ್ತಿಯಲ್ಲಿ ಇಂದು ಕರ್ತವ್ಯದಲ್ಲಿದ್ದ ಸಿಬಂದಿಗೆ, ಖಡಕ್ ಪೊಲೀಸ್ ಅಧಿಕಾರಿ ಸಂದೇಶ್ ಪಿ.ಜಿ‌ ಅವರು ಈ‌ಬಗ್ಗೆ ಅಗತ್ಯ ಕ್ರಮ ಜರುಗಿಸಿ ಸಿಬ್ಬಂದಿ ಗೆ ಸೂಕ್ತ‌‌ನಿರ್ದೇಶನ ನೀಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.