HomePage_Banner_
HomePage_Banner_

3 ತಿಂಗಳು ವಿದ್ಯುತ್ ಬಿಲ್‌ ಕಟ್ಟಬೇಕಾಗಿಲ್ಲ

ಬೆಳ್ತಂಗಡಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರು ಇನ್ನು ಮೂರು ತಿಂಗಳು ವಿದ್ಯುತ್ ಬಿಲ್‌ ಕಟ್ಟಬೇಕಾಗಿಲ್ಲ ಎಂದು‌ ಕೇಂದ್ರ ಸರಕಾರ ಇದೀಗ ಹೇಳಿಕೆ‌‌ ನೀಡಿದೆ.

ವಿದ್ಯುತ್ ಕಂಪೆನಿಗಳೂ ಕೂಡ ತಮಗೆ ವಿದ್ಯುತ್ ಸರಬರಾಜು ಮಾಡುವ ಕಂಪೆನಿಗಳಿಗೂ ಹಣ ಪಾವತಿಸಬೇಕಿಲ್ಲ ಎಂದು ಸೂಚಿಸಿದೆ. ಬ್ಯಾಂಕ್ ಇಎಮ್ ಐ ಬಳಿಕ ಕೇಂದ್ರ ಸರಕಾರ ಜನತೆಗೆ ನೀಡುತ್ತಿರುವ ಇನ್ನೊಂದು ರಿಲೀಫ್ ಆಗಿದೆ ಈ ಸುದ್ದಿ.

ಜೊತೆಗೆ ವಿದ್ಯುತ್ ಸರಬರಾಜು ಸಂಸ್ಥೆ ಪ್ರತೀ ವರ್ಷ ಈ ತಿಂಗಳಲ್ಲಿ ಸಾಧಾರಣವಾಗಿ ಯುನಿಟ್ ದರ ಏರಿಕೆ ಮಾಡುವ ಕ್ರಮ‌ಚಾಲ್ತಿಯಲ್ಲಿತ್ತು. ಈ‌ಬಾರಿ ಅದಕ್ಕೂ‌ ಬ್ರೇಕ್ ಹಾಕಿದೆ.
ಜನತೆಗೆ ರಿಯಾಯಿತಿ ನೀಡುವಂತೆ ಕೇಂದ್ರ ವಿದ್ಯುತ್ ಸರಬರಾಜು ಆಯೋಗ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.

ವಿದ್ಯುತ್ ಗ್ರಾಹಕರಿಗೆ ಈ‌ಮೂರು ತಿಂಗಳು ವಿದ್ಯುತ್ ಉಚಿತವಲ್ಲ.
ಮೂರು ತಿಂಗಳ ಬಳಿಕ ಬಿಲ್ ಪಾವತಿಸಬೇಕು ಈ ಮೂರು ತಿಂಗಳು ಬಿಟ್ಟು ಗ್ರಾಹಕರು ಬಿಲ್ ಕಟ್ಟುವ ವೇಳೆ ಯಾವುದೇ ದಂಡ ವಿಧಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.