ಬೆಳ್ತಂಗಡಿ ತಾಲೂಕಿನ‌ ಮೊದಲ‌ ಪಾಸಿಟಿವ್ ಪ್ರಕರಣ! ಕರಾಯದ ವ್ಯಕ್ತಿಗೆ ಸೋಂಕು ದೃಢ

ಬೆಳ್ತಂಗಡಿ; ಕರಾಳ ಕೊರೊನಾ ಪ್ರಕರಣ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಬೆಳ್ತಂಗಡಿ ತಾಲೂಕಿನಲ್ಲೂ ಮೊದಲ ಪ್ರಕರಣ ಬಹುತೇಕ ದೃಢವಾಗಿದೆ.

ಕರಾಯ ಗ್ರಾಮದ ಜನತಾ ಕಾಲನಿ ನಿವಾಸಿ, ವಿದೇಶದಿಂದ ಮರಳಿದ ವ್ಯಕ್ತಿ ಇದೀಗ ರೋಗದ ಎಲ್ಲಾ‌  ಲಕ್ಷಣಗಳನ್ನು ಹೊಂದಿದ್ದಾರೆ.

ಅವರನ್ನೂ ಈಗಾಗಲೇ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾ ಶಂಕಿತ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ‌ ತೀವ್ರ ಮುಂಜಾಗೃತಾ ಕ್ರಮ ಕೈಗೊಂಡಿದೆ.

ಘಟನಾ ಸ್ಥಳದಲ್ಲಿ ತಾಲೂಕು ಆಡಳಿತದಿಂದ ಮುಂಜಾಗ್ರತಾ ಕ್ರಮ

ಬ್ಯಾರಿಕೇಡ್ ಹಾಕಿ‌ ರಸ್ತೆ ಬಂದ್; ತಾಲೂಕು ಆಡಳಿತ ಕರಾಯದಲ್ಲಿ ಮೊಕ್ಕಾಂ:

ಪ್ರಕರಣ ಬಹುತೇಕ ದೃಢವಾಗುತ್ತಿರುವಂತೆ
ಸ್ಥಳದಲ್ಲಿ‌ ತಾಲೂಕು ಆಡಳಿತ ಮೊಕ್ಕಾಂ ಹೂಡಿದೆ.

ತಹಶಿಲ್ದಾರ್ ಗಣಪತಿ ಶಾಸ್ರ್ತಿ, ತಣ್ಣೀರುಪಂತ ಪಿಡಿಒ ಸಹಿತ ಪಿಡಿಒ, ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳು ಸಹಿತ ಸಂಬಂಧಪಟ್ಟವರು ಮೊಕ್ಕಾಂ ಹೂಡಿ ಮುಂಜಾಗ್ರತಾ ಕ್ರಮಕ್ಕೆ ನೇತ್ರತ್ವ ನೀಡಿದ್ದಾರೆ.
ಕರಾಯಕ್ಕೆ ಹೋಗುವ ರಸ್ತೆಯನ್ನು ಬ್ಯಾರಿಕೇಡರ್ ಹಾಕಿ ತಡೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.