ಬ್ಯಾಂಕ್ ಸಾಲಗಾರರಿಗೆ ಬಿಗ್ ರಿಲೀಫ್ 3 ತಿಂಗಳ ಸಾಲದ ಕಂತು ಮುಂದೂಡಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಹಕಾರಿ ಬ್ಯಾಂಕ್ ಸೇರಿದಂತೆ ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸಾಲಗಾರರಿಗೆ ಕೊರೊನಾ ಎಫೆಕ್ಟ್ ಲಾಕ್‌ಡೌನ್‌ನಿಂದಾಗಿ ವಿಶೇಷ ಆಫರ್‌ನ್ನು ಆರ್‌ಬಿಐ ಘೋಷಿಸಿದೆ. 3 ತಿಂಗಳ ಕಾಲ ಯಾವುದೇ ಬ್ಯಾಂಕ್‌ಗಳ ಸಾಲ ಮರುಪಾವತಿ ಕಂತುಗಳನ್ನು ಕಟ್ಟಬೇಕಾಗಿಲ್ಲ.

ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಲ್ಲಿ ತೆಗೆದಿರುವ ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲಾ ಸಾಲಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಟಿ ನಡೆಸಿ ಈ ಘೋಷಣೆ ಹೊರಡಿಸಿದ್ದಾರೆ.

ಗೋಲ್ಡ್‌ಲೋನ್, ಹಣಕಾಸು ಸಂಸ್ಥೆಗಳಿಂದ ಪಡೆದ ಯಾವುದೇ ಸಾಲಗಳ ಮರುಪಾವತಿ ಕಂತುಗಳನ್ನು ಜೂನ್ ತಿಂಗಳವರೆಗೆ ಮುಂದೂಡಲಾಗಿದೆ. ಇದರೊಂದಿಗೆ ಕೊರೊನಾ ಎಫೆಕ್ಟ್ ಲಾಕ್‌ಡೌನ್‌ನಿಂದಾಗಿ ಲೋನ್ ಹೇಗಪ್ಪಾ ಕಟ್ಟೋದು ಎಂಬ ಚಿಂತೆಯಲ್ಲಿರುವ ಜನಸಾಮಾನ್ಯರೂ ದೊಡ್ಡ ನಿಟ್ಟುಸಿರುವ ಬಿಡುವಂತಾಗಿದೆ.

ನಿನ್ನೆಯಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ದೇಶದ ಜನಸಾಮಾನ್ಯರಿಗೆ ವಿಶೇಷ ಕೊರೊನಾ ಪ್ಯಾಕೇಜ್ ಘೋಷಿಸಿರುವ ಬೆನ್ನಲ್ಲೇ ಆರ್‌ಬಿಐ ಕೂಡಾ ದೇಶದ ಸಾಲಗಾರರ ಚಿಂತೆಯನ್ನು ದೂರ ಮಾಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.