HomePage_Banner_
HomePage_Banner_

ಕೊರೊನಾ ಪರಿಹಾರ: ಕೇಂದ್ರ ಸರಕಾರದಿಂದ 1.70ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಘೋಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾಮನ್

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ 21 ದಿನಗಳ ಲಾಕ್‍ಡೌನ್ ಘೋಷಣೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗದಂತೆ ಮಾಡಲು ಕೇಂದ್ರ ಸರಕಾರವು ಕೊರೊನಾ ಪರಿಹಾರವಾಗಿ 1.70ಲಕ್ಷ ಕೋಟಿ ರೂ. ಪ್ಯಾಕೇಜನ್ನು ಘೋಷಣೆ ಮಾಡಿದೆ. 

ಮಾ.26ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಮಾತನಾಡಿ ಜನರಿಗೆ ಉಚಿತವಾಗಿ ಪಡಿತರ ವಿತರಿಸಲು “ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ ಘೋಷಣೆ ಮಾಡಿದ್ದಾರೆ.
ಈ ಯೋಜನೆ ಪ್ರಕಾರ 80ಕೋಟಿ ಅರ್ಹ ಫಲಾನುಭವಿಗಳಲ್ಲಿ ಪ್ರತಿ ಕುಟುಂಬದ ಸದಸ್ಯನಿಗೆ ಈಗ ನೀಡುತ್ತಿರುವ 5 ಕೆ.ಜಿ. ಅಕ್ಕಿ ಅಥವಾ ಗೋಧಿಯ ಜತೆಗೆ 1 ಕೆ.ಜಿ. ಬೇಳೆಯನ್ನು ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ನೀಡಲಾಗುವುದು ಇದರಿಂದ ದೇಶದ ಮೂರನೇ ಎರಡು ಭಾಗದ ಜನರಿಗೆ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನಿರ್ಮಾಲಾ ಘೋಷಿಸಿದ ಇತರ ನಿರ್ಣಯಗಳು:
* ಕೊರೊನಾ ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ಆಶಾಕಾರ್ಯಕರ್ತರು, ನರ್ಸ್‍ಗಳು ಪ್ರತಿಯೊಬ್ಬರಿಗೂ ತಲಾ 50ಲಕ್ಷರೂ. ಮೌಲ್ಯದ ವೈದ್ಯಕೀಯ ವಿಮೆ ನೀಡಲಾಗುವುದು.

* ಉಜ್ವಲ ಯೋಜನೆಯಡಿ 8.3ಕೋಟಿ ಬಡ ಕುಟುಂಬಗಳಿಗೆ ಮುಂದಿನ ಮೂರು ತಿಂಗಳು ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ

* ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 8.69 ಕೋಟಿ ರೈತರಿಗೆ ಏಪ್ರಿಲ್ ಕಂತಿನ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು.

* ಜನಧನ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮುಂದಿನ 3 ತಿಂಗಳು 500 ರೂಪಾಯಿಯಂತೆ ತಿಂಗಳಿಗೆ ನೀಡಲಾಗುವುದು

* ವೃದ್ಧಾಪ್ಯ, ವಿಧವಾ ಮತ್ತು ದಿವ್ಯಾಂಗರು ಪಿಂಚಣಿ ಪಡೆಯುತ್ತಿರುವವರಿಗೆ ಮುಂದಿನ 3 ತಿಂಗಳು 2 ಕಂತುಗಳಲ್ಲಿ ಒಂದು ಸಾವಿರ ರೂಪಾಯಿ ನೀಡಲಾಗುವುದು

* ನರೇಗಾ ಯೋಜನೆಯಡಿಯಲ್ಲಿ ದಿನಗೂಲಿ ಹೆಚ್ಚಳ ಮಾಡಲಾಗಿದ್ದು, ಪ್ರತಿಯೊಬ್ಬರಿಗೆ ಸರಾಸರಿ 2ಸಾವಿರ ಹೆಚ್ಚುವರಿ ಸಿಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.