ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಇನ್ನು ಶಂಕಿತ ಕೊರೊನಾ ರೋಗಿಗಳಿಗೆ ಮೀಸಲು!

Advt_NewsUnder_1
Advt_NewsUnder_1

ಉಳಿದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಶಾಸಕ ಪೂಂಜ

ಬೆಳ್ತಂಗಡಿ: ಇಲ್ಲಿನ ಸಮುದಾಯ ಸಾರ್ವಜನಿಕ ಆಸ್ಪತ್ರೆ ಇನ್ನು ಮುಂದೆ ಶಂಕಿತ ಕೊರೊನಾ ರೋಗಿಗಳಿಗೆ ಮಾತ್ರ ಒಳರೋಗಿಗಳಾಗಿ ದಾಖಲಾಗಲು ಮೀಸಲಿರಿಸಲು ನಿರ್ಧರಿಸಲಾಗಿದೆ.
ಮಾ. ೨೫ ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ, ತಾಲೂಕಿನ ವೈದ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಜೊತೆಗಿನ ಶಾಸಕ ಹರೀಶ್ ಪೂಂಜ ಅವರ ಮಹತ್ವದ ಸಮಾಲೋಚನೆ ಬಳಿಕ ಈ ವಿಚಾರ ಪ್ರಕಟಿಸಲಾಯಿತು.

ಹೊರರೋಗಿಗಳ ವಿಭಾಗ ಎಂದಿನಂತೆ ಸೇವೆ ಮುಂದುವರಿಸಲಿದೆ. ಕೊರೊನಾ ರೋಗಿಗಳನ್ನು ದಾಖಲು ಮಾಡಿದಾಗ ಅಲ್ಲಿ ಇತರ ರೋಗಿಗಳೂ ಒಳರೋಗಿಗಳಾಗಿದ್ದರೆ ಇದರಿಂದ ಅಪಾಯ ಅಧಿಕ ಎಂಬ ಕಾರಣಕ್ಕೆ ಈ ನಿರ್ಧಾರ ಅನಿವಾರ್ಯವಾಗಿದೆ.

ಈ ಸಂದರ್ಭ ಗ್ರಾಮಾಂತರ ಭಾಗಗಳಿಂದ ಬರುವ ತುರ್ತು ಆವಶ್ಯಕತೆ ಇರುವ ಒಳರೋಗಿಗಳಿಗೆ ಇತರೆ ಖಾಸಗಿ ಅಸ್ಪತ್ರೆಯಲ್ಲಿ ಉಚಿತ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಾಸಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.