ಮುಂಡಾಜೆ ಗ್ರಾ.ಪಂ: ಕೊರೊನಾ ಬಗ್ಗೆ ಜಾಗೃತಿ, ಕರಪತ್ರ ಬಿಡುಗಡೆ

ಮುಂಡಾಜೆ: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯಲ್ಲಿ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೊರೊನಾ ವೈರಸ್ ತಡೆಗಟ್ಟುವ ಕುರಿತು ಮುಂಜಾಗ್ರತವಾಗಿ ಜಾಗೃತಿ ಕಾರ್ಯಕ್ರಮ ನಡೆಸಿ ಕರಪತ್ರ ಹಂಚಲಾಯಿತು.

ಮಾ.20ರಂದು ಚಾಮುಂಡಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ
ಗ್ರಾಮೀಣ ನೈರ್ಮಲ್ಯ ಸಮಿತಿಯ ಅಧ್ಯಕ್ಷೆ
ಅಶ್ವಿನಿ ಎ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಮುಂಡಾಜೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯಾ ಮಾತನಾಡಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಪ್ರಾ.ಆ.ಕೇಂದ್ರವನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು,ರೋಗ ಬಾರದಂತೆ ಸ್ವಚ್ಛತೆ ಹಾಗೂ ಜಾಗ್ರತೆ ಕಾಪಾಡಿ ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.

ಮುಂಡಾಜೆ ಪಂ.ಉಪಾಧ್ಯಕ್ಷೆ ವಸಂತಿ,ಸ್ಥಳೀಯ ಸಂಘ ಸಂಸ್ಥೆ ,ಸ್ತ್ರೀಶಕ್ತಿ ತಂಡದ ಸದಸ್ಯರು, ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಿರಿಯ ಆರೋಗ್ಯ ಸಹಾಯಕಿ ರೂಪಾಲತಾ ಸ್ವಾಗತಿಸಿ , ಸರೋಜಿನಿ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.