ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಗಳಿಗೆ ಮುಗಿಬಿದ್ದ ಜನರು!

Advt_NewsUnder_1
Advt_NewsUnder_1

* ಯುಗಾದಿ ಹಬ್ಬದ ದಿನದಂದು ಅಗತ್ಯ ವಸ್ತುಗಳಿಗೆ ಹೆಚ್ಚಿದ ಬೇಡಿಕೆ
* ತಾಲೂಕಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ
* ಮೆಡಿಕಲ್‍ಗಳಲ್ಲೂ ಸಾಲುಗಟ್ಟಿ ನಿಂತ ಜನ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ದಿನದಂದು ಅಗತ್ಯ ವಸ್ತುಗಳ ಖರೀದಿಗೆ ತಾಲೂಕಿನ ಸಾರ್ವಜನಿಕರು ಮುಗಿಬಿದ್ದರು.
ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಖರೀದಿ ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಸಮಯಾವಕಾಶವನ್ನು ನಿಗದಿ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ಬೆಳಗ್ಗೆಯಿಂದಲೇ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿದ್ದರು.


ದಿನಸಿ ಅಂಗಡಿಗಳಿಗೆ ಮುಗಿಬಿದ್ದ ಜನರು:
ಯುಗಾದಿ ಹಬ್ಬದ ದಿನವಾದ ಮಾ.25ರಂದು ಅಗತ್ಯ ವಸ್ತುಗಳ ಖರೀದಿಗಾಗಿ ಸಾರ್ವಜನಿಕರು ಪಟ್ಟಣದ ಪ್ರಮುಖ ದಿನಸಿ ಅಂಗಡಿಗಳಲ್ಲಿ ಬೆಳಗ್ಗೆಯಿಂದಲೇ ಮುಗಿಬಿದ್ದು ಕೊಂಡುಕೊಳ್ಳಲು ಮುಂದಾಗಿದ್ದರು. ಗುರುವಾಯನಕೆರೆ, ಸಂತೆಕಟ್ಟೆ, ಬೆಳ್ತಂಗಡಿ, ಉಜಿರೆ, ನಾರಾವಿ ಮುಂತಾದ ಪ್ರಮುಖ ಕೇಂದ್ರಗಳಲ್ಲಿ ದಿನಸಿ ಅಂಗಡಿಗಳ ಎದುರು ವಾಹನಗಳ ದಟ್ಟಣೆಯ ಜತೆಗೆ ಅಂಗಡಿಗಳಲ್ಲಿ ಜನಜಂಗುಳಿ ಉಂಟಾಯಿತು.


ಮಾರುಕಟ್ಟೆಗಳಲ್ಲಿಯೂ ಹೆಚ್ಚಿದ ಖರೀದಿ:
ಮನೆಯಲ್ಲೇ ಯುಗಾದಿ ಹಬ್ಬಕ್ಕಾಗಿ ಸಾರ್ವಜನಿಕರು ತರಕಾರಿ, ಹೂ, ಹಣ್ಣಿನ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಖರೀದಿಗೆ ಮುಂದಾಗಿದ್ದರು. ಆದರೆ ಮಾಂಸದ ಅಂಗಡಿಗಳಲ್ಲಿ ಜನರ ಖರೀದಿಯು ವಿರಳವಾಗಿತ್ತು.


ಔಷಧ ಅಂಗಡಿಗಳಲ್ಲಿ ಕ್ಯೂ ನಿಂತ ಜನರು:
ಅಗತ್ಯ ವಸ್ತುಗಳಲ್ಲಿ ಒಂದಾದ ಔಷಧ ಖರೀದಿಗೂ ಮೆಡಿಕಲ್‍ಗಳಲ್ಲಿ ಕೊಂಡುಕೊಳ್ಳಲು ಜನರು ಸಾಲುಗಟ್ಟಿ ನಿಂತು ಔಷಧಗಳನ್ನು ಖರೀದಿಸಿದರು. ಮಡಂತ್ಯಾರುನ ಔಷಧ ಅಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತು ಔಷಧ ಖರೀದಿಸುವುದು ಕಂಡು ಬಂತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.