HomePage_Banner_
HomePage_Banner_

ಇಡೀ ದೇಶವೇ ಲಾಕ್ ಡೌನ್- ಪ್ರಧಾನಿ ಹೇಳಿಕೆ

ಇಡೀ ದೇಶವೇ ಲಾಕ್ ಡೌನ್- ಪ್ರಧಾನಿ ಹೇಳಿಕೆ
ಎಪ್ರಿಲ್ 14 ರವರೆಗೆ ಭಾರತ‌ ಕಂಪ್ಲೀಟ್ ಲಾಕ್

ಬೆಳ್ತಂಗಡಿ : ಕೊರೊನಾ ವೈರಸ್ ಅಟ್ಟಹಾಸವನ್ನು ತಡೆಯಲು ಕಟಿಬದ್ಧವಾದ ಕೇಂದ್ರ ಸರಕಾರವು ಇಂದು ಮಧ್ಯರಾತ್ರಿಯಿಂದ ಮುಂದಿನ 21 ದಿನಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಮಾ.24ರಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಜನರು ಮನೆಯಲ್ಲೇ ಇದ್ದು ನಿಮಗೆ ನೀವೇ ಮನೆಯಲ್ಲಿ ಲಕ್ಷ್ಮಣ ರೇಖೆ ಹಾಕಿಕೊಳ್ಳಿ, ಯಾರೂ ಮನೆಗಳಿಂದ ಹೊರಗೆ ಬರಬಾರದು ಎಂದು ಹೇಳಿದರು.

ಈ ಲಾಕ್ ಡೌನ್ ಇದು ಒಂದು ರೀತಿಯಲ್ಲಿ ಕಫ್ಯೂ೯ ಇದ್ದಂತೆ.
ಪ್ರಧಾನಿಯಾಗಿ ಅಲ್ಲ ನಿಮ್ಮ ಮನೆಯ ಒಬ್ಬ ಸದಸ್ಯನಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ವದಂತಿಗಳಿಗೆ ಯಾವುದೇ ಕಾರಣಕ್ಕೂ ಯಾರೂ ಕಿವಿಗೊಡಬೇಡಿ. ಯಾರೂ ಮನೆಗಳಿಂದ ಹೊರಬರದಂತೆ ನೀವೇ ಸಂಕಲ್ಪ ಮಾಡಿಕೊಳ್ಳಿ ಎಂದರು.

ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ರೂ.15 ಸಾವಿರ ಕೋಟಿ ಮೀಸಲಿಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.