HomePage_Banner_
HomePage_Banner_

ಜನತಾ ಕರ್ಫ್ಯೂ ಪಾಲಿಸದವರಿಗೆ ಪೊಲೀಸರಿಂದ ಲಾಠಿ ರುಚಿ

ಬೆಳ್ತಂಗಡಿ :ಜನತಾ ಕರ್ಫ್ಯೂ ಪಾಲಿಸದೆ ಬೇಕಾಬಿಟ್ಟು ತಿರುಗಾಡಿದವರಿಗೆ ಮಾ. 24 ರಂದು ಬೆಳ್ತಂಗಡಿ ನಗರ ಮತ್ತು ಇತರೆಡೆಗಳಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರ ಬಳಗದವರು ಲಾಠಿ ರುಚಿ ತೋರಿಸಿದ್ದಾರೆ.


ಮಾ. 23 ರಂದು ದ. ಕ ಜಿಲ್ಲೆಗೆ ಮಾತ್ರ ಜನತಾ ಕರ್ಫ್ಯೂ ವಿಸ್ತರಣೆಗೊಂಡಿದ್ದ ವೇಳೆ ಸೋಮವಾರ ಜನ ಇದ್ದಕ್ಕಿದ್ದಂತೆ ಪೇಟೆ ಪಟ್ಟಣಗಳಲ್ಲಿ ಎಂದಿನಂತೆ ಸೇರುವುದನ್ನು ಕಂಡು ಧ್ವನಿವರ್ಧಕದ ಮೂಲಕ ಅವರಿಗೆ ಎಚ್ಚರಿಕೆ ಸಂದೇಶ ನೀಡಿ ಅವರನ್ನು ಮನೆ ಸೇರುವಂತೆ ಮಾಡಿದ್ದರು. ಇದರ ಬೆನ್ನಿಗೇ ಮಾ. 23 ರ ರಾತ್ರಿಯಿಂದ ಜನತಾ ಕರ್ಫ್ಯೂ ರಾಜ್ಯಕ್ಕೆ ವಿಸ್ತರಣೆಗೊಂಡಾಗ ಬೆಳಗ್ಗಿನಿಂದಲೇ ಎಚ್ಚೆತ್ತುಕೊಂಡು ರಸ್ತೆಗಿಳಿದಿದ್ದ ಮಂದಿಯನ್ನು ವಿಚಾರಿಸಿ ಜ್ವಾಲಿ ರೈಡ್‌ಗಾಗಿ ಪೇಟೆ ಸುತ್ತಲು ಬಂದಿದ್ದ ದ್ವಿಚಕ್ರ ವಾಹನಗಳವರಿಗೆ ಪೊಲೀಸ್ ಶೈಲಿಯಲ್ಲಿ ಉತ್ತರ ನೀಡಿ ಮನೆಗೆ ಕಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.