HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ಲೋಕದಾದ್ಯಂತ ಮಾನವ ಕುಲದ ಜೀವನಕ್ಕೆ ತೊಂದರೆ ಮಾಡುವ ಕೊರೋನ ಸಂಬಂಧಿತ ಕೆಟ್ಟ ಕ್ರಿಮಿಗಳನ್ನು ದೂರಮಾಡಲು ಭಗವಾನ್ ಮಹಾವಿಷ್ಣುವನ್ನು ಪ್ರಾರ್ಥಿಸಿ ನೆರವೇರಿಸಲಾಯಿತು.

ಅಷ್ಟು ಋಷಿಗಳು ಹಿಂದೆ ಕ್ರಿಮಿ ರೂಪದ ಮಹಾಮಾರಿಯನ್ನು ತಮ್ಮ ತಪೋ ಮಹಿಮೆಯಿಂದ ದೂರಮಾಡಿ ನಾಶವಾಗುವ ಹಂತದಲ್ಲಿರುವ ಈ ಲೋಕದ ಜೀವರಾಶಿಯನ್ನು ರಕ್ಷಿಸಲು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ನಮ್ಮನ್ನು ಅಂತಹ ಮಹಾಮಾರಿಯಿಂದ ರಕ್ಷಿಸಿರಿ ಎಂಬುದಾಗಿ ಪ್ರಾರ್ಥಿಸುತ್ತಿದ್ದರು. ಆ ಮಂತ್ರವನ್ನು ಸಹಸ್ರಬಾರಿ ಪಠಿಸಿ ತಿಲ ಮತ್ತು ತುಪ್ಪವನ್ನು ಸಮರ್ಪಿಸಿ ನೆರವೇರಿಸಲಾಯಿತು.
ಈ ಹೋಮವನ್ನು ಶ್ರೀ ವೆಂಕಟ್ರಮಣ ಅಡಿಗ, ಧರ್ಮಸ್ಥಳ ಇವರ ನೇತೃತ್ವದಲ್ಲಿ ಶ್ರೀಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದು ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.