ಸಾರ್ವಜನಿಕರಿಗೆ ಸಹಕರಿಸಲು ತಾಲೂಕು ಆಡಳಿತ ಮನವಿ

ಬೆಳ್ತಂಗಡಿ: ದ.ಕ. ಜಿಲ್ಲೆಯಾದ್ಯಂತ ಮಾ.31ರವರೆಗೆ ಲಾಕ್‌ಡೌನ್, ನಿಷೇಧಾಜ್ಞೆ ಆದೇಶವಿರುವುದರಿಂದ ಅನಗತ್ಯವಾಗಿ ಮನೆಯಿಂದ ಹೊರಬರದೇ ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ಆಡಳಿತ ಮನವಿ ಮಾಡಿದೆ.
ಕೊರೊನಾ ಬಗ್ಗೆ ಭಯಬೇಡ ಆದರೆ ಎಚ್ಚರವಿರಲಿ ಒಬ್ಬರಿಂದ ಒಬ್ಬರು ದೂರವಿದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವೈರಸ್ ಸೋಂಕಿನಿಂದ ನಿಮ್ಮನ್ನು ಹಾಗೂ ನಿಮ್ಮವರನ್ನು ಕಾಪಾಡಿಕೊಳ್ಳಿ. ಮಾ.31ರವರೆಗೆ ಆಹಾರ ಸಾಮಾಗ್ರಿ, ಔಷಧ, ತುರ್ತು ಸೇವೆಗಳನ್ನು ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.

ಈ ಅವಧಿಯಲ್ಲಿ ಸಭೆ, ಸಮಾರಂಭ, ಜಾತ್ರೆ, ಉತ್ಸವ, ಕ್ರೀಡಾ ಪಂದ್ಯಾಟ ಹಾಗೂ ಜನಸಂದಣಿಯಾಗುವ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ವಿದೇಶದಿಂದ ಬಂದವರು ಕಡ್ಡಾಯವಾಗಿ ೧೪ದಿನ ಯಾರನ್ನು ಭೇಟಿಯಾಗದೆ ಮನೆಯಲ್ಲಿರಬೇಕಲ್ಲದೇ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಸೂಚಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.