ಕೊರೊನಾ ವೈರಸ್ ಭೀತಿ: ಮಂಗಳೂರು ಸೇರಿ 9 ಜಿಲ್ಲೆಗಳು ಲಾಕ್ ಡೌನ್ !

ದ್ವಿತೀಯ ಪಿಯು ವಿದ್ಯಾರ್ಥಿಗಳ ಕೊನೆಯ ಪರೀಕ್ಷೆ ನಿಗದಿಯಂತೆ ನಡೆಯಲಿದೆ

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ

ಬೆಳ್ತಂಗಡಿ: ಕೊರೊನಾ ಸೋಂಕು ದೃಢಪಟ್ಟಿರುವ (ಪಾಸಿಟಿವ್) ಜಿಲ್ಲೆಗಳು ಹಾಗೂ ಗಡಿ ಜಿಲ್ಲೆಗಳು ಸೇರಿದಂತೆ ಒಂಬತ್ತು ಜಿಲ್ಲೆಗಳನ್ನು ಮಾ.31 ರವರೆಗೆ ಲಾಕ್ ಡೌನ್ ಮಾಡಲು ಸರಕಾರ ತೀರ್ಮಾನಿಸಿದೆ.

ಕೋವಿಡ್ – 19ಗಾಗಿ ರಚಿಸಿರುವ ಕಾರ್ಯಪಡೆಯ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಗಳೂರು ಲಾಕ್ ಡೌನ್ ಆಗಲಿದ್ದು, ಈ ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆ, ಆಸ್ಪತ್ರೆ, ಹೂ, ಹಣ್ಣು, ತರಕಾರಿ, ಹಾಲು ಹಾಗೂ ಇತರ ಅಗತ್ಯ ವಸ್ತುಗಳು ಇರಲಿದೆ ಎಂದು ಬೊಮ್ಮಾಯಿ ಹೇಳಿದರು.

ದ್ವಿತೀಯ ಪಿಯು ಪರೀಕ್ಷೆ ಅಭಾದಿತ :

ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳ ಕೊನೆಯ ಪರೀಕ್ಷೆಗೆ ಈ ಲಾಕ್ ಡೌನ್ ಅನ್ವಯಿಸಲ್ಲ, ನಿಗದಿಯಂತೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಎಸಿ ಬಸ್ , ಮೆಟ್ರೋ ಸೇವೆ ಇಲ್ಲ:
ಕೆಎಸ್ ಆರ್ ಟಿಸಿಯ ಬಸ್ ಗಳಲ್ಲಿ ಎಸಿ ಬಸ್ ಗಳು, ಹೊರ ರಾಜ್ಯ ಹಾಗೂ ಅಂತರ್ ಜಿಲ್ಲೆಗಳ ನಡುವಿನ ಕೆಎಸ್ ಆರ್ ಟಿಸಿ ಬಸ್ ಓಡಾಟವನ್ನು ಹಾಗೂ ಬೆಂಗಳೂರಿನ ಮೆಟ್ರೋ ಸಂಚಾರವನ್ನು ಮಾ.31 ರವರೆಗೆ ಸರಕಾರ ಸ್ಥಗಿತಗೊಳಿಸಿದ್ದು,
ರಾಜ್ಯದಲ್ಲಿ ಜನತಾ ಕಫ್ಯೂ೯ ಬಳಿಕ ಇಂದು ರಾತ್ರಿ 9 ರ ನಂತರವೂ 144 ಸೆಕ್ಷನ್ ಜಾರಿ ಬರಲಿದೆ ಎಂದರು.

ದೇಶದ 25 ಜಿಲ್ಲೆಗಳು ಲಾಕ್ ಡೌನ್ :
ಕೇಂದ್ರ ಸರಕಾರವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ದೇಶದ ಕೊರೊನಾ ಸೋಂಕು ತಗುಲಿರುವ 23 ರಾಜ್ಯಗಳ 25 ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಲಾಕ್ ಡೌನ್ ಮಾಡಲು ಸೂಚಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.