ಬೆಳ್ತಂಗಡಿಯ ಸೋಮವಾರದ ಸಂತೆ ರದ್ದು

ಕೊರೊನಾ ಭೀತಿ ಹಿನ್ನೆಲೆ ಸೋಮವಾರದ ಸಂತೆ ರದ್ದುಗೊಳಿಸಿ ಪ.ಪಂ.ಮುಖ್ಯಾಧಿಕಾರಿ ಆದೇಶ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ಪ್ರಮುಖ ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟು ನಡೆಯುವ ಪ್ರತಿ ಸೋಮವಾರದ ಸಂತೆಯನ್ನು ರದ್ದುಗೊಳಿಸಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಆದೇಶಿಸಿದ್ದಾರೆ.

ವಾರದ ಸಂತೆಗೆ ಹೊರಜಿಲ್ಲೆ, ಸುತ್ತಮುತ್ತಲಿನ ತಾಲೂಕುಗಳಿಂದ ಹಾಗೂ ಗ್ರಾಮಗಳಿಂದ ವ್ಯಾಪಾರಕ್ಕಾಗಿ ಆಗಮಿಸುವುದರಿಂದ ಮುಂಜಾಗ್ರತಾ ಕ್ರಮಕೈಗೊಳ್ಳುವ ಅಗತ್ಯ ಇರುವುದರಿಂದ ಸರಕಾರದ ಆದೇಶದಂತೆ ಮಾ.31ರವರೆಗೆ ವಾರದ ಸಂತೆಯನ್ನು ರದ್ದು ಪಡಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಪಟ್ಟಣ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.