ರಾಷ್ಟ್ರೀಯ ಕಬಡ್ಡಿ ಸಂಭಾವ್ಯ ತಂಡದಲ್ಲಿ ಸಚಿನ್ ಪ್ರತಾಪ್

ಗ್ರಾಮೀಣ ಪ್ರತಿಭೆ ಉಜಿರೆ ಎಸ್‍ಡಿಎಂ ಕಾಲೇಜು ಅಂತಿಮ ಪದವಿ ವಿದ್ಯಾರ್ಥಿ

ಬೆಳ್ತಂಗಡಿ: ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಸಚಿನ್ ಪ್ರತಾಪ್ ಭಾರತ ಕಬಡ್ಡಿ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


ತರಬೇತಿ ಶಿಬಿರಕ್ಕೆ 36 ಮಂದಿ ಆಟಗಾರರು ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಯ್ಕೆಗೊಂಡ ಏಕೈಕ ಆಟಗಾರ ಎಂಬುದು ಇವರ ಹೆಗ್ಗಳಿಕೆ. ಆ ತರಬೇತಿ ಶಿಬಿರದಿಂದ 12ಮಂದಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಾರೆ.

ಸುಳ್ಯದ ಪಾಲೆಪ್ಪಾಡಿ ನಿವಾಸಿಯಾದ ಸಚಿನ್ ಪ್ರತಾಪ್ ಉಜಿರೆ ಎಸ್‍ಡಿಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಗ್ರಾಮೀಣ ಭಾಗದ ಪ್ರತಿಭಾವಂತ ಆಟಗಾರ. ಈಗಾಗಲೇ 50ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ, ಕೆಲವು ದಿನಗಳ ಹಿಂದೆ ಜೈಪುರದಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್‍ನಲ್ಲಿ ಪರಾಭಾವಗೊಂಡರೂ ಪ್ರತಾಪ್ 2 ಪಂದ್ಯಗಳಲ್ಲಿ ಅತ್ಯುತ್ತಮ ರೈಡರ್ ಎನಿಸಿದ್ದರು. ಈ ಪ್ರದರ್ಶನವು ಇವರನ್ನು ಭಾರತ ತಂಡಕ್ಕೆ ಕರೆಯುವಂತೆ ಮಾಡಿದೆ.

ಎಸ್‍ಡಿಎಂ ತರಬೇತುದಾರ ಕೃಷ್ಣಾನಂದರ ಪ್ರೋತ್ಸಾಹ:
ಶಾಲಾ ಮಟ್ಟದಲ್ಲಿ ಖೋ-ಖೋ ಆಟಗಾರನಾಗಿ ನಂತರ ಕಬಡ್ಡಿ ಕ್ರೀಡೆಯತ್ತ ಆಸಕ್ತಿ ಬೆಳೆದು ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಹರ್ಷಿತ್, ವೀರನಾಥ, ಕುಮಾರ್ ಅವರು ತರಬೇತಿ ನೀಡಿದರು. ಆ ನಂತರ ಉಜಿರೆ ಎಸ್‍ಡಿಎಂ ಕಾಲೇಜಿಗೆ ಸೇರ್ಪಡೆಯಾದ ನಂತರ ಇಲ್ಲಿನ ಕಬಡ್ಡಿ ತರಬೇತುದಾರ ಕೃಷ್ಣಾನಂದ ಅವರ ಪೂರ್ಣ ಸಹಕಾರ ನೀಡಿ ಬೆಂಬಲಿಸಿರುವುದು ಈ ಸಾಧನೆಗೆ ಕಾರಣ ಎಂದು ಸಚಿನ್ ಪ್ರತಾಪ್ ಹೇಳುತ್ತಾರೆ.
ಕೆಎಫ್‍ಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ 3 ಮಕ್ಕಳಲ್ಲಿ ಸಚಿನ್ ಪ್ರತಾಪ್ ಎರಡನೆಯವರು. ಹಿರಿಯ ಸಹೋದರಿ ಶರ್ಮಿಳಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ, ಕಿರಿಯ ಸಹೋದರಿ ಸುಮಾ ಕ್ರೀಡಾ ಕೋಟಾದಡಿ ತರಬೇತಿ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.