HomePage_Banner_
HomePage_Banner_
HomePage_Banner_

ನಾಳೆಯಿಂದ ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಗಳಿಲ್ಲ

Advt_NewsUnder_1

ಔಷಧ ವ್ಯಾಪಾರಸ್ಥರ ಸಂಘದಿಂದ ಮಾಸ್ಕ್, ಡಾ. ಮಿತ್ತೂರು ಸುಬ್ರಹ್ಮಣ್ಯ ಭಟ್‌ರಿಂದ ಗುಳಿಗೆಗಳ ವಿತರಣೆ

ಬೆಳ್ತಂಗಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬೆಳ್ತಂಗಡಿ ತಾಲೂಕು ಪತ್ರಿಕಾಭವನದಲ್ಲಿ ನಡೆಯುವ ಎಲ್ಲಾ ಪತ್ರಿಕಾಗೋಷ್ಠಿಗಳನ್ನು ಮಾ.22 ರಿಂದ ಮಾ. 31 ರ ವರೆಗೆ ರದ್ದುಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ತಿಳಿಸಿದ್ದಾರೆ.
ಪ್ರೆಸ್‌ಮೀಟ್‌ನಲ್ಲಿ ಹಲವು ಮಂದಿ ಒಟ್ಟಾಗಿ ಸೇರುವ ಜಾಗವಾಗಿರುವ ಕಾರಣ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಈ ಅನಿವಾರ್ಯ ಕ್ರಮವನ್ನು ಪತ್ರಕರ್ತರ ಸಂಘದ ಸದಸ್ಯರು ಬಹುಮತದ ಒಪ್ಪಿಗೆಯ ಮೇರೆಗೆ ಹಾಗೂ ಸುದ್ದಿಗಳನ್ನು ಮಾಡುವ ವೇಳೆ ಪತ್ರಕರ್ತರು ಸರಕಾರ ನೀಡುವ ಎಚ್ಚರಿಕೆಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಕೋರಲಾಗಿದೆ. ಈ ತೀರ್ಮಾನ ಗಂಭೀರ ಮತ್ತು ತುರ್ತು ಸಂದರ್ಭಗಳನ್ನು ಹೊರತುಪಡಿಸಿ ತೆಗೆದುಕೊಳ್ಳಲಾಗಿದೆ. ತುರ್ತು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲ ಪತ್ರಕರ್ತರೂ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಹಾಜರಾಗಲಿದ್ದಾರೆ ಎಂದರು.

ಔಷಧ ವ್ಯಾಪಾರಸ್ಥರ ಸಂಘದಿಂದ ಪತ್ರಕರ್ತರಿಗೆ ಮಾಸ್ಕ್ ವಿತರಣೆ:
ಇಂದು ಬೆಳಿಗ್ಗೆ ಪತ್ರಿಕಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದಿಂದ ಬೆಳ್ತಂಗಡಿ ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಂಘದ ಅಧ್ಯಕ್ಷ ಡಿ ಜಗದೀಶ್ ಅವರು ಆಗಮಿಸಿ, ಸೋಂಕು ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ಪತ್ರಕರ್ತರು ಜನತೆಗೆ ಮಾಹಿತಿ ನೀಡುವಲ್ಲಿ ಮಂಚೂಣಿಯಲ್ಲಿದ್ದು ಅಭಿನಂದನಾರ್ಹ ಕಾರ್ಯ. ಪತ್ರಕರ್ತರ ವೈಯುಕ್ತಿಕ ಆರೋಗ್ಯ ರಕ್ಷಣೆಯೂ ಮುಖ್ಯವಾಗಿದ್ದು ಆ ಹಿನ್ನೆಲೆಯಲ್ಲಿ ನಮ್ಮ ಔಷಧ ವ್ಯಾಪಾರಸ್ಥರ ಸಂಘ ನಿಮಗೆ ಬೇಕಾದ ಎಲ್ಲ ನೆರವು ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಅಲಿಕುಂಞಿ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಮನೋಹರ್ ಬಳಂಜ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಗುರುಮೂರ್ತಿ ಶಗ್ತಿತ್ತಾಯ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಭುವನೇಶ್ವರ ಜಿ ಗೇರುಕಟ್ಟೆ, ಉಪಸ್ಥಿತರಿದ್ದರು.

ಇದೇ ವೇಳೆ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ವೈಯುಕ್ತಿಕ ಕಾಳಜಿ ವಹಿಸಿ ಪುತ್ತೂರು ತಾಲೂಕಿನ ಮಿತ್ತೂರಿನ ಸುಜೋಕೊ ತಜ್ಞ ಡಾ. ಮಿತ್ತೂರು ಸುಬ್ರಹ್ಮಣ್ಯ ಭಟ್ ಅವರು ಬೆಳ್ತಂಗಡಿಯ ಎಲ್ಲ ಪತ್ರಕರ್ತರಿಗಾಗಿ, ಎಲ್ಲಾ ಬಗೆಯ ವೈರಸ್ ಮತ್ತು ಸೊಂಕು ತಡೆಗಟ್ಟುವ ಸಾಮರ್ಥ್ಯದ ಸರಳ ಔಷಧಿಯ ಗುಳಿಗೆಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದ್ದು ಅದನ್ನು ಸಂಘದ ಸದಸ್ಯರಿಗೆ ಜೊತೆ ಕಾರ್ಯದರ್ಶಿ ಗುರುಮೂರ್ತಿ ಶಗ್ರಿತ್ತಾಯ ಕೊಕ್ಕಡ ವಿತರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.