ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡದೇ ಎಚ್ಚರಿಕೆಯಿಂದಿರಿ ಎಂದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ

ಬೆಳ್ತಂಗಡಿ: ಪ್ರಪಂಚಾದ್ಯಂತ ಹರಡಿರುವ ಈ ಕೊರೊನಾ ವೈರಸ್ (ಕೋವಿಡ್-೧೯) ಬಗ್ಗೆ ನಿರ್ಲಕ್ಷ್ಯ ಬೇಡ, ಇದರ ಬಗ್ಗೆ ಎಲ್ಲ ಕಡೆಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಅತೀ ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಹೊರತು ಮೋಜು, ಮನರಂಜನೆಗಾಗಿ ಮನೆಯಿಂದ ಹೊರಗೆ ಹೋಗಬೇಡಿ ಎಂದು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರ.ಎಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾತನಾಡಿದ ಅವರು ಈ ಸಮಯವನ್ನು ಅಧ್ಯಯನಕ್ಕಾಗಿ ಸದ್ಬಳಕೆ ಮಾಡಿಕೊಳ್ಳಿ. ಕಾಲೇಜಿನಿಂದ ಈಗಾಗಲೇ ಆನ್‌ಲೈನ್ ಮೂಲಕ ಸಂದೇಶ ಕಳುಹಿಸಲಾಗಿದೆ. ಉಪನ್ಯಾಸಕರು ಇಂಟರ್‌ನೆಟ್ ಮುಖಾಂತರ ಓದುವ ಸಾಮಾಗ್ರಿಗಳನ್ನು, ನೋಟ್ಸ್‌ಗಳನ್ನು ಕಳುಹಿಸಿರುವುದರಿಂದ ಅಧ್ಯಯನ ಕೈಗೊಳ್ಳಿ ಯಾವುದೇ ಗಾಸಿಪ್, ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಸಂಯಮದಿಂದಿರಿ ಎಂದರು.
ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಮಾ.೨೨ರಂದು ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಇದನ್ನು ನಾವು ಕಟ್ಟುನಿಟ್ಟಿನಿಂದ ಪಾಲಿಸೋಣ ಹಾಗೂ ಎಲ್ಲರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಜನಸಂದಣಿ ಇರುವಲ್ಲಿ ಸೇರಬೇಡಿ. ಪ್ರತಿಯೊಬ್ಬರು ಪರಸ್ಪರ ೩ಮೀ. ಅಂತರ ಕಾಯ್ದುಕೊಳ್ಳಿ. ಆರೋಗ್ಯ, ಸ್ವಚ್ಛತೆ ಬಗ್ಗೆ ಜಾಗೃತವಾಗಿರಿ. ಎಲ್ಲರೂ ಒಗ್ಗಟ್ಟಾಗಿ ಈ ಸಮಸ್ಯೆಯನ್ನು ಎದುರಿಸೋಣ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.