ಧರ್ಮಸ್ಥಳದ ದೈವ ನರ್ತಕ ಅಣ್ಣು ಪರವ ಧರ್ಮಸ್ಥಳ ನಿಧನ

ಧರ್ಮಸ್ಥಳ: ಧರ್ಮಸ್ಥಳ ಮಿಥಿಲಾ ನಗರ ನಿವಾಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದ ಅಣ್ಣು ಪರವ(77ವ) ರವರು ಅಸೌಖ್ಯದಿಂದ ಮಾ.20 ರಂದು ನಿಧನರಾದರು.
ಅಣ್ಣು ತರವರವರು ಧರ್ಮಸ್ಥಳ ಕ್ಷೇತ್ರವಲ್ಲದೆ ಉಜಿರೆ ದೇವಸ್ಥಾನ, ಉಳಿಯಬೀಡು, ಬೂಡುಜಾಲು, ಬರೆಂಗಾಯ ಮುಂತಾದ ಕಡೆ ದೈವ ನರ್ತಕನಾಗಿ ಸುಮಾರು 50ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಧರ್ಮಸ್ಥಳ ಕ್ಷೇತ್ರ ಹಾಗೂ ಬೆಳ್ತಂಗಡಿಯಲ್ಲಿ ಸುದ್ದಿ ಬೆಳ್ಳಿಹಬ್ಬ ಸಮಾರಂಭದಲ್ಲಿ ಸನ್ಮಾನಿಸಲಾಗಿತ್ತು.ಮೃತರು ಪತ್ನಿ ರಾಮಕ್ಕು, ಪುತ್ರ ಶೇಖರ ಪರವ, ಪುತ್ರಿಯರಾದ ಸುಶೀಲಾ, ಶರ್ಮಿಳಾ, ಭಾರತಿ, ಶೋಭಾ, ಶುಭ, ಸೊಸೆ ಅಳಿಯಂದಿರು, ಮೊಮ್ಮಕ್ಕಳು ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿಗಳು, ಉಳಿಯ, ಬೂಡುಜಾಲುನ ಪ್ರತಿನಿಧಿಗಳು, ಗ್ರಾಮ ಪಂಚಾಯತ್ ಸದಸ್ಯರು ಆಗಮಿಸಿ ಸಾಂತ್ವನ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.