ಉಜಿರೆ ಬೀದಿ ಬದಿಯ ಅನಧಿಕೃತ ಅಂಗಡಿಗಳ ತೆರವು ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಗ್ರಾ.ಪಂ

ಉಜಿರೆ: ಇಲ್ಲಿನ ಮುಖ್ಯರಸ್ತೆಯ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಗ್ರಾಮಸಭೆಯಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಉಜಿರೆ ಗ್ರಾಮ ಪಂಚಾಯತ್ ಕಳೆದ ಎರಡು ದಿನಗಳಿಂದ ತೆರವು ಕಾರ್ಯಾಚರಣೆ ನಡೆಸಿದೆ.
ಇತ್ತೀಚೆಗೆ ನಡೆದ ಉಜಿರೆ ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಮುಖ್ಯರಸ್ತೆಯ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅನಧಿಕೃತ ೧೫ ಅಂಗಡಿಗಳು ಹಾಗೂ ಎಂಪೈರ್ ಹೊಟೇಲನ್ನು ತೆರವು ಮಾಡಿದೆ.
ಮುಖ್ಯ ಚರಂಡಿಗೆ ಕಲುಷಿತ ನೀರು ಬಿಡದಂತೆ ಸೂಚನೆ:
ಉಜಿರೆಯ ಬೆಳಾಲು ಕ್ರಾಸ್‌ನಿಂದ ಜನಾರ್ದನ ಶಾಲೆಯವರೆಗಿನ ಮನೆ,ಹೋಟೆಲ್,ಅಂಗಡಿಗಳು ಹಾಗೂ ಲಾಡ್ಜ್‌ಗಳಿಂದ ಹೋಗುವ ಕೊಳಚೆ ನೀರನ್ನು ಮುಖ್ಯ ಚರಂಡಿಗೆ ಬಿಟ್ಟು ಪರಿಸರ ದುರ್ವಾಸನೆಯಿಂದ ಕೂಡಿತ್ತು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಅರಿತ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಸ್ಥಳಕ್ಕೆ ತೆರಳಿ ದಂಡ ಹಾಕಿ ನೋಟಿಸ್ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.