ಅಳದಂಗಡಿಯ ಇಬ್ಬರಿಗೂ ಕೊರೊನಾ ಸೋಂಕಿಲ್ಲವೆಂದು ದೃಢ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಒಮನ್‌ನಿಂದ ಸ್ವದೇಶಕ್ಕೆ ಮರಳಿದ್ದ ಅಳದಂಗಡಿ ಗ್ರಾಮದ ಇಬ್ಬರಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದು ಪರೀಕ್ಷೆ ನಡೆಸಿದ ವರದಿಯಲ್ಲಿ ಸೋಂಕಿಲ್ಲ (ನೆಗೆಟಿವ್) ಎಂದು ದೃಢಪಟ್ಟಿದೆ.
‘ಅಳದಂಗಡಿಯ ಇಬ್ಬರನ್ನು ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ನಿಗಾವಹಿಸಿ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಅವರ ಗಂಟಲಿನ ಸ್ರಾವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿಯು ಮಾ.18ರ ಬೆಳಗ್ಗೆ ಕೊರೊನಾ ಸೋಂಕಿಲ್ಲ ಎಂದು ದೃಢಪಟ್ಟಿದೆ. ನೆಗೆಟಿವ್ ಬಂದರೂ ಸುರಕ್ಷತೆ ದೃಷ್ಟಿಯಿಂದ ಇನ್ನು 14 ದಿನಗಳ ಕಾಲ ಅವರನ್ನು ಮನೆ ಬಿಟ್ಟು ಸಾರ್ವಜನಿಕವಾಗಿ ಕಾಣಿಸದಂತೆ ಕಟ್ಟಪ್ಪಣೆ ಮಾಡಲಾಗಿದೆ. ಸರಕಾರಿ ಆಸ್ಪತ್ರೆಯಿಂದಲೂ ಅವರ ಮನೆಗೆ ಭೇಟಿ ನೀಡಿ ಪ್ರತಿದಿನ ಆರೋಗ್ಯ ವಿಚಾರಿಸಲಾಗುವುದು ಜತೆಗೆ ಆಶಾ ಕಾರ್ಯಕರ್ತೆಯರು ದಿನಲೂ ಮಾಹಿತಿ ಕಲೆಹಾಕುತ್ತಾರೆ’ ಎಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾವತಿ ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.