ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸೇವಾ ಟ್ರಸ್ಟ್‌ಗೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂಲ ಸಮಾದಿ ಇರುವ ಪಡುಮಲೆ ಎರುಕೊಟ್ಯ, ಬೆರ್ಮೆರೆ ಗುಡಿ, ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳಿರುವ ಸ್ಥಳದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬದ 9ಜನ ಹಕ್ಕುದಾರರು ಮಾ.16ರಂದು ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿರುವ ಉಪನೋಂದಣೆ ಅಧಿಕಾರಿ ಕಛೇರಿಗೆ ಬಂದು ಈ ಪಡುಮಲೆಯ ದೇಯಿ ಬೈದೆದಿ ಸಮಾಧಿಯ ಪುಣ್ಯ ಸ್ಥಳವನ್ನು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಕೆ. ಹರಿಕೃಷ್ಣ ಬಂಟ್ವಾಳರಿಗೆ ಇದರ ಹಕ್ಕು ಪತ್ರದ ದಾಖಲೆಗಳನ್ನು ದಾನದ ರೂಪದಲ್ಲಿ ಸ್ಥಳದ ಹಕ್ಕುಪತ್ರವನ್ನು ಪಡುಮಲೆಯ ಅಭಿವೃದ್ಧಿ ಸಮಿತಿಯ ಹೆಸರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ, ಪ್ರ.ಕಾರ್ಯದರ್ಶಿ ಪುತ್ತೂರಿನ ಶ್ರೀಧರ ಪಟ್ಲ ,ಖಂಚಾಚಿ ಬೆಳ್ತಂಗಡಿಯ ಶೈಲೇಶ್ ಕುರ್ತೋಡಿ, ಸಂಚಾಲಕರಾದ ರತನ್ ನ್ಯಾಕ್, ಗ್ರಾಮ ಪಂಚಾಯತು ಸದಸ್ಯ ಗುರು ಪ್ರಸಾದ್ ರೈ , ಹಾಗೂ ನವೀನಚಂದ್ರ ರೈ ಮುಂತಾದವರು ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.