ಬೆಳ್ತಂಗಡಿ ಬಸ್‌ನಿಲ್ದಾಣದಲ್ಲಿ ಬೀದಿನಾಟಕ ಪ್ರದರ್ಶಿಸಿ ಕೊರೊನಾ ಬಗ್ಗೆ ಜಾಗೃತಿ

ಬೆಳ್ತಂಗಡಿ: ಇತ್ತೀಚಿನ ಕೊರೊನಾ ವೈರಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಬೆಳ್ತಂಗಡಿ ನಗರದ ಬಸ್ ನಿಲ್ದಾಣದಲ್ಲಿ ಬೀದಿನಾಟಕ ಪ್ರದರ್ಶಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಮಾ.17ರಂದು ನಡೆದ ಬೀದಿನಾಟಕ ಪ್ರದರ್ಶನದಲ್ಲಿ ಕಾಲರಾ, ಕ್ಷಯ, ಮಲೇರಿಯಾ, ಕ್ಯಾನ್ಸರ್ ಇತ್ತೀಚಿನ ಕೊರೊನಾ ವೈರಸ್ ಹಾಗೂ ಗುಟ್ಕಾ, ಧೂಮಪಾನ, ಮದ್ಯಪಾನದಿಂದ ಆಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಿಗೆ ಮನಮುಟ್ಟುವಂತೆ ಮನೋಜ್ಞವಾಗಿ ಅಭಿನಯಿಸಿದ ಸುರತ್ಕಲ್‌ನ ಕರಾವಳಿ ಜಾನಪದ ಕಲಾವೇದಿಕೆಯ ಗಿರೀಶ್ ನಾವಡ ಮತ್ತು ತಂಡ ಬೀದಿನಾಟಕದ ಮೂಲಕ ಜಾಗೃತಿ ಉಂಟು ಮಾಡಿತು.


ಕೊರೊನಾ ಜಾಗೃತಿ: ಬೀದಿನಾಟಕ ಪ್ರದರ್ಶನದಲ್ಲಿ ಜನರಲ್ಲಿ ಇತ್ತೀಚೆಗೆ ಹೆಚ್ಚು ಭೀತಿ ಉಂಟು ಮಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ಜನರು ಭಯ ಪಡುವ ಬದಲು ಮುಂಜಾಗ್ರತೆ ವಹಿಸಬೇಕು. ವಿದೇಶದಿಂದ, ಹೊರರಾಜ್ಯ, ಜಿಲ್ಲೆಗಳಿಂದ ಬರುವವರ ಬಗ್ಗೆ ನಿಗಾವಹಿಸಿ, ಶೀತ, ಕೆಮ್ಮು, ನೆಗಡಿ ಆದವರಿಂದ ಸುರಕ್ಷತೆ ಇರಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿ ಎಂದು ಬೀದಿನಾಟಕದಲ್ಲಿ ಮಾಹಿತಿ ನೀಡಲಾಯಿತು.
ಬೀದಿನಾಟಕ ಪ್ರದರ್ಶನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿ, ಆಶಾಮೆಂಟರ್ ಹರಿಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.