ದಲಿತ ನಿಂದನೆ ಪ್ರಕರಣ; ಸಹಶಿಕ್ಷಕಿ ವಿರುದ್ಧ ಎಟ್ರಾಸಿಟಿ‌ ಕೇಸು

ಬೆಳ್ತಂಗಡಿ: ತಾಲೂಕಿನ ಲಾಯಿಲ ಪಡ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಉಮಾ ರಾವ್ ವಿರುದ್ಧ ದಲಿತ‌ನಿಂದನೆ ದೂರಿನ ಹಿನ್ನೆಲೆಯಲ್ಲಿ ಎಟ್ರಾಸಿಟಿ ಕೇಸು ದಾಖಲಾಗಿದೆ. ಅವಮಾನಕ್ಕೊಳಗಾದ ಮಕ್ಕಳ ತಂದೆ ದೂರು ದಾಖಲಿಸಿದ್ದಾರೆ. ಫೆ.26 ರಂದು ಸ್ಥಳೀಯ ಶಾಲೆಯ ಬಳಿಯ ವ್ಯಕ್ತಿಯೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕಿ ದಲಿತ ಮಕ್ಕಳನ್ನು ಶಾಲೆಯಲ್ಲಿಯೇ ಬಿಟ್ಟು ಉಳಿದ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಕ್ಕಳ ಹೆತ್ತವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ವಿಳಂಬವಾಗಿತ್ತು. ಈಗ ನೊಂದ ಮಕ್ಕಳ ಪೋಷಕರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದು ಶಿಕ್ಷಕಿ ಉಮಾರಾವ್ ವಿರುದ್ದ ದಲಿತ ನಿಂದನೆ ಹಾಗೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.