ಕೊಯ್ಯೂರು: ಜಿ.ಪಂ ಅನುದಾನದಲ್ಲಿ ನೀರಿನ ಟ್ಯಾಂಕಿಗೆ ಶಿಲಾನ್ಯಾಸ

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಆದೂರುಪೆರಾಲ್ ಎಂಬಲ್ಲಿ 9.50 ಲಕ್ಷ ರು. ವೆಚ್ಚದಲ್ಲಿ ಕುವೆಟ್ಟು ಜಿಪಂ ಸದಸ್ಯೆ ಮಮತಾ ಎಂ. ಶೆಟ್ಟಿ ಅವರು ಒದಗಿಸಿದ ಅನುದಾನದಲ್ಲಿ ನೀರಿನ ಟ್ಯಾಂಕಿಗೆ  ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಮತಾ ಎಂ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ಗ್ರಾಪಂ ಅಧ್ಯಕ್ಷೆ ಶಶಿಕಲಾ ವಿ.ಎನ್, ಉಪಾಧ್ಯಕ್ಷ ರಾಮಣ್ಣ ಗೌಡ, ಸದಸ್ಯರಾದ ತಾರಾನಾಥ ಗೌಡ, ನಾರಾಯಣ ಗೌಡ, ಶಶಿಕಲಾ ಸಾದೂರು, ಶಶಿಕಲಾ ಮಲೆಬೆಟ್ಟು, ಪುಷ್ಪಾ, ಬಿಜೆಪಿ ಮುಖಂಡರಾದ ಗೀತಾ ರಾಮಣ್ಣ ಗೌಡ, ದಾಮೋದರ ಗೌಡ, ಯಶವಂತ, ಪ್ರಮೋದ್ ಕುಮಾರ್, ನೋಣಯ್ಯ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವಿ ರೈ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.