ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಜಿರೆ ಪ್ರಗತಿ ಮಹಿಳಾ ಮಂಡಲಕ್ಕೆ ಪ್ರಶಂಸನಾ ಪತ್ರ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸ್ತ್ರೀ ಶಕ್ತಿ ಒಕ್ಕೂಟ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಇವುಗಳ ಜಂಟಿ ಆಶ್ರಯದಲ್ಲಿ ಮಾ. 8 ರಂದು ಮಂಗಳೂರು ಜಿ.ಪಂ ನೇತ್ರಾವತಿ ಸಭಾ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಜನಪರ ಸಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮನೆಮಾತಾಗಿರುವ ಉಜಿರೆ ಪ್ರಗತಿ ಮಹಿಳಾ ಮಂಡಲಕ್ಕೆ ವಿಶೇಷ ಪ್ರಶಂಸನಾ ಪತ್ರ ಲಭಿಸಿದೆ.

ಮಹಿಳಾ ಮಂಡಲದ ಅಧ್ಯಕ್ಷತೆಯಾಗಿರುವ ಶುಭಾ ರೈ ಉಜಿರೆ ಅವರು ಸನ್ಮಾನದೊಂದಿಗೆ ಈ ಪ್ರಶಂಶನಾ ಪತ್ರವನ್ನು ಸ್ವೀಕರಿಸಿದ್ದಾರೆ.

ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ಐವನ್ ಡಿಸೋಜಾ ಮತ್ತು ಬಿ.ಎಮ್ ಫಾರೂಕ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಹಿತ ಪ್ರಮುಖ ಗಣ್ಯರು ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲಾಗಿದೆ.

ಈ ಸಮಾರಂಭದಲ್ಲಿ ಪ್ರಗತಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಜಯ ಡಿ ಶೆಟ್ಟಿ, ಪದಾಧಿಕಾರಿಗಳಾದ ಜಯಶ್ರೀ ಡಿ.ಎಂ ಗೌಡ, ಸವಿತಾ ಜಯದೇವ್, ಕಾಂತಿ ಶ್ರೀಧರ ಮತ್ತು ಜಯಶ್ರೀ ಪ್ರಕಾಶ್ ಮೊದಲಾದವರು ಜೊತೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.