HomePage_Banner_
HomePage_Banner_

ಅಂಜನಾದೇವಿಗೆ ರಾಷ್ಟ್ರಮಟ್ಟದ ವಿಜಯಸ್ಮೃತಿ ಪುರಸ್ಕಾರ

ಬೆಳ್ತಂಗಡಿ: ಸಾವಿರಾರು ವಿಶೇಷ ಚೇತನರಿಗೆ ಸರಕಾರದಿಂದ ಗುರುತಿನ ಚೀಟಿ, ಮಾಸಾಶನ ಹಾಗೂ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಉಜಿರೆಯ ಕುಮಾರಿ ಅಂಜನಾದೇವಿ ಅವರಿಗೆ 2019-20ನೇ ಸಾಲಿನ ರಾಷ್ಟ್ರಮಟ್ಟದ ವಿಜಯಸ್ಮೃತಿ ಪುರಸ್ಕಾರ ನೀಡಲಾಯಿತು.
ಕೇರಳದ ಚೆಂಗನಾಶೇರಿಯಲ್ಲಿ ಫೆ.29ರಂದು ನಡೆದ ಇಂಡಿಯನ್ ಸೀನಿಯರ್ ಛೇಂಬರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಇಂಡಿಯನ್ ಸೀನಿಯರ್ ಛೇಂಬರಿನ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಮೆನನ್, ಮುಖ್ಯ ಅತಿಥಿ ಸಂತೋಷ್ ಜಾರ್ಜ್ ಕುಳಂಗರ ಮತ್ತು ಪ್ರಶಸ್ತಿ ಪ್ರಾಯೋಜಕರಾದ ಜಯರಾಜನ್ ಅವರು ಪ್ರಶಸ್ತಿ ವಿತರಿಸಿದರು.
ಕು.ಅಂಜನಾದೇವಿ ಅವರು ವಿಶೇಷಚೇತನರಾಗಿಯೂ ಇತರರಿಗೆ ಜೀವನವನ್ನು ಮುಡಿಪಿಟ್ಟಿದ್ದು, ವಿಶೇಷಚೇತನರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು ರೂ.4೦೦ರಿಂದ ರೂ.1೦೦೦ಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಾಲೂಕಿನಲ್ಲಿ ಯುವಕ-ಯುವತಿ ಮಂಡಲಗಳು, ಜೇಸಿಸ್, ಲಯನ್ಸ್, ರೋಟರಿ ಮುಂತಾದ ಸಂಘ-ಸಂಸ್ಥೆಗಳ ನೆರವಿನೊಂದಿಗೆ ವಿಶೇಷ ಚೇತನರಿಗೆ ವೈದ್ಯಕೀಯ ಶಿಬಿರಗಳು, ತರಬೇತಿಗಳು, ಕೌನ್ಸೆಲಿಂಗ್, ಸ್ವ-ಉದ್ಯೋಗಕ್ಕೆ ಪ್ರೋತ್ಸಾಹಿಸಿದ್ದಕ್ಕೆ ೨೦೧೨ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ದೊರಕಿದೆ.
ವಿಜಯಸ್ಮೃತಿ ಪುರಸ್ಕಾರದ ಸಂದರ್ಭದಲ್ಲಿ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷ ಪಿ.ಪಿ.ಜೋಯ್, ಸ್ಥಾಪಕಾಧ್ಯಕ್ಷ ಡಾ.ಪ್ರಮೋದ್ ನಾಯಕ್, ಪೃಥ್ವಿ ರಂಜನ್ ರಾವ್, ವಿಶ್ವನಾಥ್ ಶೆಟ್ಟಿ, ಸೀನಿಯರೆಟ್ ಮೋಲ್ಸಿಜೋಯ್ ಹಾಗೂ ಅಂಜನಾದೇವಿ ಕುಟುಂಬದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.