ರುದ್ರಗಿರಿಯಲ್ಲಿ ಎರಡನೇ ದಿನದ ಸಾಂಸ್ಕೃತಿಕ, ಧಾರ್ಮಿಕ ಸಭೆ ಸಂಪನ್ನ

ಬೆಳ್ತಂಗಡಿ: ತಣ್ಣೀರುಪಂತ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವದ ಎರಡನೇ ದಿನದ ಅಂಗವಾಗಿ  ಮಾ.9 ರಂದು ಧಾರ್ಮಿಕ ಸಭೆ ಜರುಗಿತು.

ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ದಿವ್ಯ ಉಪಸ್ಥಿತಿಯನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪವಿತ್ರಪಾಣಿ ಮಾಧವ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾಧವ ಜೋಗಿತ್ತಾಯ, ಹೈಕೋರ್ಟ್ ವಕೀಲರಾದ ಬಿ.ಕೆ.ರಕ್ಷಿತ್ ಶಿವರಾಂ, ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ, ಶಾಂತಿನಗರ ಮಹಾವಿಷ್ಣು ದೇವಸ್ಥಾನ ಆಡಳಿತ ಮೊಕ್ತೇಸರರಾದ ಯು.ಜಿ.ರಾಧಾ, ಎಸ್.ಕೆಡಿ.ಆರ್.ಡಿ.ಪಿ ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ, ರುದ್ರಗಿರಿ ದೇವಸ್ಥಾನದ ಅರ್ಚಕರಾದ ಅಶೋಕ್ ಭಟ್, ಕೋಡ್ಯಡ್ಕ ಪ್ರಗತಿಪರ ಕೃಷಿಕರಾದ ಶಂಕರಭಟ್, ಬೆಳ್ತಂಗಡಿ ತಾ.ಪಂ.ಸದಸ್ಯೆ ಕೇಶವತಿ, ಕಡೆತ್ಯಾಂರ್ ರೋಟರಿ ಕ್ಲಬ್ ಅಧ್ಯಕ್ಷ ಮೋನಪ್ಪ ಪೂಜಾರಿ, ಕರಾಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅನಂತ ಕೃಷ್ಣ ಕುದ್ದಣ್ಣಾಯ, ತಣ್ಣೀರುಪಂತ ಮಹಮ್ಮಾಯಿ ದೇವಸ್ಥಾನ ಗೌರವಾಧ್ಯಕ್ಷ ಧರ್ಮಣ ನಾಯಕ್, ಬಾರ್ಯ ಸಿಎ ಬ್ಯಾಂಕ್ ಉಪಾಧ್ಯಕ್ಷ ಸೇಸಪ್ಪ ಸಾಲಿಯಾನ್, ಮನೋಹರ ಶೆಟ್ಟಿ, ಅಂತರ ಪದ್ಮರಾಜ ಅಜಿಲರು, ಮುಂತಾದವರು ಉಪಸ್ಥಿತರಿದ್ದರು. ನಂತರ  ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈಭವ, ರಾಮಚಂದ್ರಭಟ್ ನಿರ್ದೇಶನದಲ್ಲಿ ಬಾಲ ಯಕ್ಷಕಲಾ ಹಾಗೂ ಮಹಿಳೆಯರಿಂದ ಯಕ್ಷಗಾನ ಬಯಲಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.