ಮಂಗಳೂರು ವಿಶ್ವ ಮಹಿಳಾ ದಿನಾಚರಣೆಯಲ್ಲಿ ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆಯರ ಜಾನಪದ ನೃತ್ಯ

ಮಂಗಳೂರು ಜಿ.ಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ ನೇತ್ರಾವತಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ.8 ರಂದು ಜರುಗಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರಿಂದ ಯಕ್ಷಗಾನ ವೇಷಭೂಷಣದಲ್ಲಿ ಜಾನಪದ ವೈಭವದ ನೃತ್ಯ ಮಾಡುವ ಮೂಲಕ ಅಧಿಕಾರಿಗಳಿಂದ ಮತ್ತು ಸಭಿಕರಿಂದ ಮೆಚ್ಚುಗೆ ಪಡೆದರು.ಅಂಗನವಾಡಿ ಕಾರ್ಯಕರ್ತೆರಾದ  ಶಶಿಕಲಾ ಇಂದಬೆಟ್ಟು, ಭಾಗ್ಯವತಿ ಗೇರುಕಟ್ಟೆ,  ಗುಣವತಿ ಕೆ.ಎನ್.ಎರುಕಡಪ್ಪು, ಸುಜಾತ ಕುಂಠಿನಿ ಕಳಿಯ,ಅರುಣ ಶಕ್ತಿ ನಗರ ಕುವೆಟ್ಟು, ಜಯಶ್ರೀ ಗರ್ಡಾಡಿ, ಗುಲಾಬಿ ಹಚ್ಚಾಡಿ ಪಡಂಗಡಿ, ಲಾವಣ್ಯ ಓಡಿಲು, ಮೋಹಿನಿ ಪುರಿಯ ಮಡಂತ್ಯಾರು , ಗೀತಾ ಸಬರಬೈಲು,ಶ್ರೀಮತಿ ಜ್ಯೋತಿ ಸೋಣಂದೂರು ಮತ್ತು  ಶಾಂತಿ ಊರ್ಲ ಮಡಂತ್ಯಾರು ಭಾಗವಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ,ಹಿರಿಯ ಮೇಲ್ವಿಚಾರಕಿ ಸುಲೋಚನ ಕೆ.ಆರ್.ಮೇಲ್ವಿಚಾರಕಿಯರಾದ ರತ್ನಾವತಿ,ನಾಗವೇಣಿ,ವಾಣಿ ಶ್ರೀ, ಸುಮನ,ಅನ್ನಪೂರ್ಣ ಮತ್ತು ಗುಲಾಬಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.