ಸುದ್ದಿ ಸಂಪಾದಕ ಡಾ. ಯು.ಪಿ ಶಿವಾನಂದರಿಗೆ ರಾಜ್ಯಮಟ್ಟದ ಜೀವಮಾನ ಸಾಧಕ‌‌ಸನ್ಮಾನ

ಮಂಗಳೂರು; ಇಲ್ಲಿನ‌ ಕುದ್ಮುಲ್ ರಂಗರಾವ್ ಮಂಗಳೂರು ಪುರಭವನದಲ್ಲಿ‌ ಎರಡು ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 35ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಗ್ರಾಮೀಣ ಪತ್ರಿಕೋದ್ಯಮ ಜೀವಮಾನ ಸಾಧನೆಗಾಗಿ ಸುದ್ದಿ ಪ್ರಧಾನ ಸಂಪಾದಕ ಡಾ. ಯು.ಪಿ ಶಿವಾನಂದರಿಗೆ ಸನ್ಮಾನ ನಡೆಯಿತು.

ಜೊತೆಗೆ ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್ ಮತ್ತು ಆನಂದ ಶೆಟ್ಟಿ ಅವರಿಗೂ ಈ‌ಸನ್ಮಾನದ ಗೌರವ ಸಲ್ಲಿಕೆಯಾಯಿತು.

ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸನ್ಮಾನ ನಡೆಸಿಕೊಟ್ಟರು.
ಸಮಾರಂಭದಲ್ಲಿ ಸಂಸದ‌ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತು ಶಾಸಕ ಐವನ್ ಡಿಸೋಜಾ, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಜೆ. ಪಾಲೆಮಾರ್, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಹಿತ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.