ಗೇರುಕಟ್ಟೆ:ವಿದ್ಯುತ್ ಕಂಬಕ್ಕೆ ಮಾರುತಿ ಕಾರು ಡಿಕ್ಕಿ. ಚಾಲಕ ಪಾರು

Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸಂಬೋಳ್ಯ ಸಮೀಪದಲ್ಲಿರುವ ವಿದ್ಯುತ್ ಟ್ರಾನ್ಸ್ ಪಾರ್ಮು ಗೆ ಕಂಬಕ್ಕೆ ಮಾರುತಿ ಅಲ್ಟೋ ಕಾರು ಡಿಕ್ಕಿ ಹೊಡೆದು ಕಾರು ಮತ್ತು ವಿದ್ಯುತ್ ಕಂಬ ಜಕಂ ಅದ ಘಟನೆ ಮಾ.6 ರಂದು ಮಧ್ಯಾಹ್ನದ ವೇಳೆಗೆ ನಡೆಯಿತು.
ಕೇರಳ ಮೂಲದ ಬೆನ್ನಿ ಹರ್ಮಾಡಿ ಎಂಬವರು ಕೆಎಲ್.44. 4860 ಮಾರತಿ ಅಲ್ಟೋ ಕಾರನ್ನು ಗುರುವಾನಕೆರೆ ಕಡೆಯಿಂದ ಗೇರುಕಟ್ಟೆ ಸಮೀಪದ ತನ್ನ ಹರ್ಮಾಡಿ ಮನೆಗೆ ಬರುತ್ತಿದ್ದು.ಈ ಸಮಯದಲ್ಲಿ ವಿದ್ಯುತ್ ಟ್ರಾನ್ಸ್‌‌ ಫಾರ್ಮ್ ಕಂಬಕ್ಕೆ ಡಿಕ್ಕಿ ಹೊಡೆದು ಎದೆ ಮತ್ತು ಕಾಲುಗಳಿಗೆ ಗುದ್ದಿದ ನೋವು ಅಗಿದೆ.ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶವಾಗಿ ಪಾರಾಗಿದ್ದಾರೆ.ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ರಬ್ಬರ್‌ ಟ್ಯಾಪಿಂಗ್ ಕೆಲಸ ಮಾಡುತ್ತಾರೆ.ಅದುದರಿಂದ ನಿದ್ರೆ ಮಂಪರಿನಲ್ಲಿದ್ದು ಬಹುಶಃ ಡಿಕ್ಕಿ ಹೊಡೆದಿರಬಹುದೆಂದು ಸ್ಥಳೀಯ ರು ಹೇಳಿ ಕೊಳ್ಳುತ್ತಿದ್ದರು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.