ಹುಣ್ಸೆಕಟ್ಟೆ : ಜಾನುವಾರುಗಳ ಸಾಮೂಹಿಕ ಜಂತುಹುಳಗಳ ನಿವಾರಣಾ ಕಾರ್ಯಕ್ರಮ

ಹುಣ್ಸೆಕಟ್ಟೆ : ದ.ಕ ಹಾಲು ಒಕ್ಕೂಟದ ಸಹಯೋಗದಲ್ಲಿ ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಸದಸ್ಯರುಗಳ ರಾಸುಗಳಿಗೆ 10ನೇ ಸುತ್ತಿನ ಸಾಮೂಹಿಕ ಜಂತುಹುಳ ನಿವಾರಕ ಔಷಧಿಯನ್ನು ನೀಡುವ ಕಾರ್ಯಕ್ರಮವು ಮಾ-6 ರಂದು ಜರುಗಿತು.
ಕಾರ್ಯಕ್ರಮವನ್ನು ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ನಿರಂಜನ ಬಾವಂತಬೆಟ್ಟು ಉದ್ಘಾಟಿಸಿ ಎಲ್ಲಾ ಸದಸ್ಯರುಗಳ ರಾಸುಗಳಿಗೆ ಜಂತುಹುಳುವಿನ ಔಷಧಿಯನ್ನು ಒಕ್ಕೂಟವು ರಿಯಾಯಿತಿ ದರದಲ್ಲಿ ನೀಡುತ್ತಲಿರುವ ಬಗ್ಗೆ ತಿಳಿಸಿ ಇದರ ಸದುಪಯೋಗವನ್ನು ಸದಸ್ಯರುಗಳು ಪಡೆದುಕೊಳ್ಳವುದೆಂದು ತಿಳಿಸಿದರು. ಒಕ್ಕೂಟದ ಪಶುವೈದ್ಯರಾದ ಡಾ| ಗಣಪತಿ ಮಾತನಾಡಿ ಜಂತುಹುಳದ ಅಗತ್ಯತೆ ಬಗ್ಗೆ ಸದಸ್ಯರಿಗೆ ತಿಳಿಸಿದರು. ಸಂಘದ ಅಧ್ಯಕ್ಷರಾದ ರಮಾದೇವಿ ವಿಸ್ತರಣಾಧಿಕಾರಿ ಸುವಿತ್ರ, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಜಾತ ಶೆಟ್ಟಿ, ಸಹಾಯಕಿ ಶೋಭಾ, ಹಾಗೂ ಸಂಘದ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.