ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ನೂತನ ಮನೆಯ ಕೀ ಹಸ್ತಾಂತರ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ದಾನಿಗಳಿಂದ ಸಂಗ್ರಹಿಸಿದ ಮೊತ್ತದಿಂದ ಕುಕ್ಕಾವು ಪ್ರದೇಶದ ತೀರಾ ಬಡ ಕುಟುಂಬದ ಅಬೂ ಕಾಕ ಎಂಬವರ ಮನೆಯ ಕೀ ಹಸ್ತಾಂತರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಮನೆಯ ಕೆಲಸವು ಅಡಿಪಾಯ ಹಂತದಲ್ಲಿ ಸ್ಥಗಿತಗೊಂಡಿದ್ದು ಹಲವಾರು ದಾನಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನ ಸಿಗದೇ ಬೇಸತ್ತ ಸಂದರ್ಭದಲ್ಲಿ ಹಲವಾರು ಮಂದಿ ಭರವಸೆಕೊಟ್ಟು ಈಡೇರಿಸದ ಮನೆಯ ಕೆಲಸ ಕಾರ್ಯವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಚಾರಿಟಬಲ್ ಟ್ರಸ್ಟ್ ಸಮಿತಿಯ ವತಿಯಿಂದ ನಿರ್ಮಿಸಿಕೊಡುವ ಭರವಸೆ ಕೊಟ್ಟು ಕೇವಲ ಎಂಟು ತಿಂಗಳ ಅಂತರದಲ್ಲಿ ದಾನಿಗಳಿಂದ ಸಂಗ್ರಹಿಸಿದ ಮೊತ್ತದಿಂದ ಮನೆಯ ಸಂಪೂರ್ಣ ಕೆಲಸ ಕಾರ್ಯಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗಿದೆ ಮಾ.6 ರಂದು ಮನೆಯ ಯಜಮಾನರಿಗೆ ಟ್ರಸ್ಟಿನ ಸದಸ್ಯರು ಕೀ ಹಸ್ತಾಂತರಿಸುವ ಮೂಲಕ ಮನೆಯ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.


ನೂರುಲ್ ಹುದಾ ಮಸೀದಿಯ ಸದರ್ ಮುಅಲ್ಲಿಂ ಸಮೀರ್ ಅಶ್ರಫಿ ದುವಾದಶಿರ್ವಚಿಸಿದರು,ಸಮಾರಂಭದಲ್ಲಿ ನೂರುಲ್ ಹುದಾ ಮಸೀದಿ ಕುಕ್ಕಾವು ಅದ್ಯಕ್ಷ ಅಬೂಬಕ್ಕರ್ ಕುಕ್ಕಾವು ಮಸೀದಿ ಗುರು ಜಾಫರ್ ಸಅದಿ, ಸಾದಿಕ್ ಮುಸ್ಲಿಯಾರ್,ಅಲ್ಫಾಝ್ ಮುಸ್ಲಿಯಾರ್ ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್  ಇದರ ಕಾರ್ಯಾಧ್ಯಕ್ಷರಾದ ಬಶೀರ್ ಕೂರ್ನಡ್ಕ ಉಪಾಧ್ಯಕ್ಷರಾದ ಕಾಸೀಂ ಮುಸ್ಲಿಯಾರ್ ಮಾಚಾರ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ (ಮುನ್ನ ಕಮರಡಿ) ಹಕೀಂ ಕೆ.ಸಿ ರೋಡ್ ಸಫ್ವಾನ್ ಮಲ್ಲ್ಪೆ,ಲತೀಫ್ ಹಂಡೇಲ್,ಸಿದ್ದೀಕ್ ಕೋಯ ಸ್ಥಳೀಯರಾದ ಕೆ.ಎಂ ಇಬ್ರಾಹಿಮ್ ಹಸೈನಾರ್,ಬಶೀರ್ ಕುಕ್ಕಾವು, ರಶೀದ್ ಕಾಜೂರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ  ಸಂಸ್ಥೆಯ ಕಾರ್ಯ ನಿರ್ವಾಹಕರಾದ ಅಜಯ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.