ಶಿಶಿಲ: ಶಿಶಿಲ ಗ್ರಾಮದ ಕಪಿಲಾ ನದಿ ಮುರತ್ತಗುಂಡಿ ಎಂಬಲ್ಲಿ ಸಂಗಡಿಗರ ಜೊತೆ ಸ್ನಾನಕ್ಕೆ ಹೋಗಿದ್ದ ಬಾಲಕ ಸುಹಾಸ್ (17ವ.) ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಮಾ.5 ರಂದು ನಡೆದಿದೆ.
ಮೃತರು ಇದೇ ಗ್ರಾಮದ ಉಮಂತಿಮಾರು ಕೊರಗು ಮುಗೇರ ಎಂಬವರ ಪುತ್ರರಾಗಿದ್ದಾರೆ. ಸುಹಾಸ್ ಅವರು ಸಂಗಡಿಗರಾದ ಉಮೇಶ್ ಮತ್ತು ತ್ಯಾಗರಾಜ್ ಅವರ ಜೊತೆ ನದಿನೀರಿನಲ್ಲಿ ಸ್ನಾನಕ್ಕೆ ಹೋಗಿದ್ದರು. ಇವರು ಸ್ನಾನಕ್ಕೆ ಇಳಿದಿದ್ದ ಪ್ರದೇಶದಲ್ಲಿ ಭಾರೀ ಆಳದ ಗುಂಡಿ ಇದ್ದು ಇಲ್ಲಿ ನಾಪತ್ತೆಯಾಗಿದ್ದ ಸುಹಾಸ್ ಅವರ ಮೃತದೇಹ ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಧಾವಿಸಿದ್ದಾರೆ. ಇದೀಗ ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ.