HomePage_Banner_
HomePage_Banner_

ಮಾ.7-8: ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ

ಧರ್ಮಸ್ಥಳ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ ೩೫ ನೇ ಕರ್ನಾಟಕ ರಾಜ್ಯ ಪತ್ರಕರ್ತರ ಸಮ್ಮೇಳನ ಇದೇ ಮೊದಲ ಬಾರಿಗೆ ಕರಾವಳಿ ಭಾಗವಾದ ಮಂಗಳೂರಿನಲ್ಲಿ ಆಯೋಜನೆಗೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಾನಿಧ್ಯದಲ್ಲಿ ನಡೆಯುವ ಈ ರಾಜ್ಯ ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಮಾ. ೧ ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದ ಬಳಿಕ ಅವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು. ಸಮ್ಮೇಳನದ ಆಶಯ ನುಡಿಗಳನ್ನು ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ನಡೆಸಿಕೊಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಉಭಯ ಜಿಲ್ಲೆಯ ಶಾಸಕರುಗಳು, ಇನ್ನೂ ಅನೇಕ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದರು.

ವಿಚಾರಗೋಷ್ಠಿಗಳು:
ಕರಾವಳಿ ಭಾಗದ ಪ್ರವಾಸೋಧ್ಯಮ ಮತ್ತು ಅಭಿವೃದ್ಧಿ ಎನ್ನುವ ವಿಚಾರಗೋಷ್ಠಿ ವಿವೇಲ್ ರೈ ಅವರ ಅಧ್ಯಕ್ಷತೆ ಸಮುದ್ರ ಮಧ್ಯದಲ್ಲೇ ನಡೆಯಲಿದೆ. ಮಾ. ೮ ರಂದು ಮಹಿಳಾ ದಿನಾಚರಣೆ ಕೂಡ ಇರುವುದರಿಂದ ಆ ದಿನದಲ್ಲಿ ಮಹಿಳೆಯರಿಗೂ ಆಧ್ಯತೆ ನೀಡಿ ರಾಜ್ಯದ ಎಲ್ಲಾ ಪತ್ರಕರ್ತೆಯರನ್ನು ಆಹ್ವಾನಿಸಿ ಅವರಿಗೋಸ್ಕರ ಒಂದು ಗೋಷ್ಠಿ ನಡೆಯಲಿದೆ. ಭಾರತೀಯ ಪತ್ರಿಕೋದ್ಯಮದ ಬಗ್ಗೆ ಮಾತನಾಡಲು ದೆಹಲಿ, ಜಾರ್ಖಂಡ್, ಶ್ರೀಲಂಕಾ ಮೊದಲಾದ ದೇಶದ ನಾನಾ ಭಾಗಗಳಿಂದ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ. ಕರಾವಳಿಯ ಪ್ರಖ್ಯಾತ ಪತ್ರಕರ್ತರೂ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಪ್ರಶಸ್ತಿ-ಪುರಸ್ಕಾರ:
ಜೊತೆಗೆ ವಿದ್ಯುನ್ಮಾನ ಮಾಧ್ಯಮ, ಆಕಾಶವಾಣಿ, ಮುದ್ರಣ ಮಾಧ್ಯಮ ಹಾಗೂ ಸಮೂಹ ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ವೃತ್ತಿಯಲ್ಲಿ ನಿರಂತರ ಸೇವೆ ಸಲ್ಲಿಸಿಕೊಂಡು ಬಂದಿರುವ ಅನೇಕ ಮಹನೀಯರಿಗೆ ಸನ್ಮಾನ-ಪುರಸ್ಕಾರ ನಡೆಯಲಿದೆ. ಪತ್ರಕರ್ತ ವೃತ್ತಿಗೆ ಸಂಬಂಧಿಸಿದಂತೆ ಪ್ರತೀವರ್ಷ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪ್ರಶಸ್ತಿಗಳಾದ ರಾಜಕೀಯ ವಿಶ್ಲೇಷಣೆ, ಅತ್ಯುತ್ತಮ ವರದಿ, ಅತ್ಯುತ್ತಮ ಛಾಯಾಚಿತ್ರ ಈ ವಿಭಾಗಗಳಿಗೆ ಕೊಡಮಾಡುವ ಪ್ರಶಸ್ತಿಗಳ ವಿತರಣೆ ಕೂಡ ನಡೆಯಲಿದೆ ಎಂದರು.

ಸಮಾರೋಪ ಸಮಾರಂಭಕ್ಕೆ ಮಂತ್ರಗಳ ಗಡಣ:
ಮಾ. ೮ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಮಾಧು ಸ್ವಾಮಿ, ಗೃಹ ಸಚಿವ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರುಗಳು ಭಾಗಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ನಡೆಯಲಿದೆ. ಜೊತೆಗೆ ಸಂಘದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸಾಧನೆ ಮಾಡಿರುವ ಕರಾವಳಿ ಭಾಗದ ಆನಂದ ಶೆಟ್ಟಿ, ಮನೋಹರ್ ಕುಮಾರ್, ಡಾ. ಯು.ಪಿ ಶಿವಾನಂದ ಮೊದಲಾದವರನ್ನೂ ಸನ್ಮಾನಿಸುವ ಕಾರ್ಯ ನಡೆಯಲಿದೆ. ರಾಜ್ಯದ ಹಿರಿಯ ಪತ್ರಕರ್ತರುಗಳಾದ ಈಶ್ವರ ದೈತೋಟ, ರವೀಂದ್ರ ಭಟ್, ಹರೀಶ್ ಕೋಣೆಮನೆ,ಮೊದಲಾದ ದಿಗ್ಗಜರುಗಳು ಒಂದೇ ವೇದಿಕೆಯಲ್ಲಿ ಜೊತೆಯಾಗಲಿದ್ದಾರೆ. ಈ ಸಮ್ಮೇಳನದಲ್ಲಿ ಪತ್ರಕರ್ತರ ಪ್ರಸ್ತುತ ಸಮಸ್ಯೆ- ಸವಾಲುಗಳು, ಮುಂದೆ ಏನು?, ಸಮಾಜ ಏನು ನಿರೀಕ್ಷೆ ಇಟ್ಟುಕೊಂಡಿದೆ, ನಾವು ಎಷ್ಟು ಬಾಧ್ಯಸ್ತರಾಗಿ ನಡೆದುಕೊಳ್ಳುತ್ತಿದ್ದೇವೆ ಮೊದಲಾದ ವಿಚಾರಗಳ ಬಗ್ಗೆ ಬಗ್ಗೆ ಚರ್ಚೆ, ವಿಮರ್ಷೆಗಳು ನಡೆಯಲಿದೆ ಎಂದರು. ಈ ಸಂದರ್ಭ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.