ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜಿ. ರಾಮನಾಥ ಭಟ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಜಿ.ರಾಮನಾಥ ಭಟ್ ಆಯ್ಕೆಗೊಂಡಿದ್ದಾರೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಯಶೋವರ್ಮ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ನೆಕ್ಕರಡ್ಕ ವಾಳ್ಯದ ಗೋರೆತೋಟದವರಾದ ಜಿ.ರಾಮನಾಥ್ ಭಟ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅನಘ್ರ್ಯ ಕೃಷಿಯನ್ನು ಗಮನಿಸಿ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 24ರಂದು ಹೊಸಂಗಡಿ ಗ್ರಾಮದ ಪೆರಿಂಜೆ ಪಡ್ಡ್ಯಾರಬೆಟ್ಟ ಸಂತೃಪ್ತಿ ಸಭಾಂಗಣದಲ್ಲಿ ದಿನಪೂರ್ತಿ ತಾಲೂಕು ಸಾಹಿತ್ಯ ಸಮ್ಮೇಳನ ಅದ್ದೂರಿಯಿಂದ ನಡೆಯಲಿದ್ದು ಸಿದ್ಧತೆಗಳು ನಡೆಯುತ್ತಿವೆ.

ಸಮ್ಮೇಳನ ಅಧ್ಯಕ್ಷರ ಕಿರು ಪರಿಚಯ: 
ಜಿ.ರಮಾನಾಥ ಭಟ್ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವರು; 1984ರಿಂದ ಮೈಸೂರಿನಲ್ಲಿ ವಾಸ. 1959ರಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‍ನಲ್ಲಿ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಪಡೆದ ಮೇಲೆ ಸುಮಾರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ನೌಕರಿ. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವ-ಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತಿ. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಅತಿಥೇಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ರಮಾನಾಥ ಭಟ್ಟರಿಗೆ ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ಅರವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದ ಆಕರ್ಷಣೆ. ಸರ್ಕಾರಿ ಸೇವಾವಧಿಯ ಬಿಡುವಿಲ್ಲದ ದಿನಗಳಲ್ಲಿಯೂ ಸಾಹಿತ್ಯಾಸಕ್ತಿಯ ಪೋಷಣೆ ಹಾಗೂ ಅಧ್ಯಯನ. ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನುಳಿದು ಬೇರೆ ಕವಿತೆಗಳು ಕನ್ನಡಕ್ಕೆ ಅನುವಾದವಾಗದಿರುವ ಕೊರತೆಯನ್ನು ನೀಗಿಸಲು ವಿಶೇಷ ಗಮನ.ಇದರ ಫಲವಾಗಿ 1999 ರವೀಂದ್ರನಾಥ ಠಾಕೂರರ ಗೀತಾಂಜಲಿ ಹಾಗೂ ಕ್ರೆಸೆಂಟ್ ಮೂನ್ ಕವನ ಸಂಗ್ರಹಗಳಿಂದ ಆಯ್ದ ಇನ್ನೂರು ಕವನಗಳ ಕನ್ನಡ ಅನುವಾದ ಗೀತಾಂಜಲಿ ಪ್ರಕಟಣೆ. ರವೀಂದ್ರರ ಉಳಿದ ಇಂಗ್ಲಿಷ್ ಕವನ ಸಂಗ್ರಹಗಳ ಕನ್ನಡ ಅನುವಾದಗಳ-ಫಲಸಂಚಯ,ವನಪಾಲಕ,ಕವಿತಾಸಂಚಯ,ಕಬೀರರ ಕವನಗಳು,ಬಿದಿಗೆಯ ಚಂದ್ರ ಮತ್ತು ಶೇಷಗೀತ-ಹಾಗೂ ರವೀಂದ್ರರು ಮತ್ತು ಗಾಂಧೀಜಿಯವರ ನಡುವಿನ ಸಂವಾದ ಹಾಗೂ ಪತ್ರಸಂಚಯ ಗುರುದೇವ ಮತ್ತು ಮಹಾತ್ಮ ಮತ್ತು ರವೀಂದ್ರರ ಜೀವನಚರಿತ್ರೆ ಗುರುದೇವ ಪ್ರಕಟಣೆ.
ಈಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ರವೀಂದ್ರರ ಇನ್ನೂರಕ್ಕೂ ಹೆಚ್ಚು ಕವಿತೆಗಳೊಂದಿಗೆ ಈ ಹಿಂದೆಯೇ ಪ್ರಕಟವಾಗಿದ್ದ ಏಳೂ ಕನ್ನಡ ಸಂಪುಟಗಳಲ್ಲಿನ ಎಲ್ಲ ಕವಿತೆಗಳನ್ನೂ ಒಳಗೊಂಡಿರುವ ಬೃಹತ್ ಸಂಪುಟ ರವೀಂದ್ರ ಕಾವ್ಯ ಸಂಚಯ(ಪ್ರಕಟಣೆ:2014).
(2018)ರವೀಂದ್ರ ಗದ್ಯ ಸಂಚಯ:ಭಾಗ ಒಂದು ರವೀಂದ್ರರ ಪ್ರಬಂಧಗಳ ಮತ್ತು ಭಾಷಣಗಳ ಮೊದಲ ಸಂಪುಟ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.