ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಕ್ಕೊತ್ತಾಯ

Advt_NewsUnder_1
Advt_NewsUnder_1
Advt_NewsUnder_1

“ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ ಸಮಾಜದ ಮೂಲ ಸೌಕರ್ಯ,ಬದ್ದತೆ ಚಿಂತನೆಯಲ್ಲಿ ನಿಜವಾದ ತಾಯಂದಿರು ಅಂಗನವಾಡಿ ಕಾರ್ಯಕರ್ತೆಯರು” ಶಾಸಕ ಹರೀಶ್ ಪೂಂಜಾ.

ಬೆಳ್ತಂಗಡಿ : ಇಲ್ಲಿಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹಕ್ಕೊತ್ತಾಯ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಶಾಸಕರ ಹರೀಶ್ ಪೂಂಜಾ ದೀಪ ಬೆಳಗಿಸು ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯವರು ಮುಗ್ದ ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ ಸಮಾಜದ ಮೂಲ ಸೌಕರ್ಯಗಳ ಚಿಂತನೆ ಯೊಂದಿಗೆ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಇವರು ಸಮಾಜಕ್ಕೆ ತಾಯಂದಿರು.ಕಡಿಮೆ ಗೌರವ ಧನ ಪಡೆಯುವ ಬಡತನ ಮಹಿಳೆಯರು ಪ್ರಮಾಣಿಕರು.ಬೇರೆ ಬೇರೆ ಸಂಘಟನೆ ಗಳ ಜೊತೆಯಲ್ಲಿ ಹೋರಾಟ ನಡೆಸಿ ಕಂಗಲಾಗಿ ಈಗ ಸ್ವತಂತ್ರ ಸಂಘ ರಚಿಸಿ ಬೇಡಿಕೆಗಳನ್ನು ಈಡೇರಿಸಲು ಧೈರ್ಯದಿಂದ ಮುಂದಾಗಿರುವ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಸಮವಸ್ತ್ರ ನೀಡುವುದಾಗಿ ಹೇಳಿದರು.ಮತ್ತು ಮುಂದಿನ ಅಧಿವೇಶನದಲ್ಲಿ ನಿಮ್ಮೊಂದಿಗೆ ಧ್ವನಿಗೂಡಿಸಿ ಸರಕಾರದ ವತಿಯಿಂದ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯವರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಕೈ ಜೋಡಿಸಿ, ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ತಿಳಿಸಿದರು.

ಬೆಳ್ತಂಗಡಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರ ಸಂಘದ ಮೂಲಕ ಮನವಿಯನ್ನು ಶಾಸಕರಿಗೆ ನೀಡಿ.ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿದರು.ಸಂಘದ ರಾಜ್ಯಾಧ್ಯಕ್ಷೆ ಹಕ್ಕೊತ್ತಾಯ ಮಂಡಿಸಿದರು.ಉಜಿರೆ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯತ ಸದಸ್ಯೆ ಸೌಮ್ಯ ಲತಾ ಜಿ.ಗೌಡ, ತಾಲೂಕು ಪಂಚಾಯತ ಉಪಾಧ್ಯಕ್ಷೆ ವೇದಾವತಿ,ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ,ಉಜಿರೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಚ್.ಪ್ರಕಾಶ್ ಶೆಟ್ಟಿ ನೊಚ್ಚ, ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕರಾದ ಸುಲೋಚನ,ರತ್ನಾವತಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಅಂಬೆಕಲ್ಲು ಜಿಲ್ಲಾ ಕೋಶಾಧಿಕಾರಿ ಆಶಾಲತಾ,ಮಾಜಿ ಕೋಶಾಧಿಕಾರಿ ಉಷಾ,ಮಂಗಳೂರು ನಗರ ಅಧ್ಯಕ್ಷೆ ಭಾನುಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾ ಹಾರೈಸಿದರು.

ಸಂಘದ ಪರವಾಗಿ ಶಾಸಕರನ್ನು ,ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಮುಖ್ಯ ಅತಿಥಿಗಳನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಗೌರವಿಸಿದರು. ಮೇಲ್ವಿಚಾರಕಿ ರತ್ನಾವತಿ ಯವರ 55 ನೇ ಪರ್ಷದ ಹುಟ್ಟು ಹಬ್ಬವನ್ನು ವೇದಿಕೆಯಲ್ಲಿ ಆಚರಿಸಲಾಯಿತು.ನಂತರ ಪಡಂಗಡಿ ವಲಯದ ಅಂಗನವಾಡಿ ಕಾರ್ಯಕರ್ತೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಲೂಕು ಸಂಘದ ಅಧ್ಯಕ್ಷೆ ರಾಜೀವಿ ಕಡವಿನಬಾಗಿಲು ಸ್ವಾಗತಿಸಿದರು.ಕಾರ್ಯದರ್ಶಿ ಶಶಿಕಲಾ ಕೆ.ವರದಿ ವಾಚಿಸಿದರು. ತಾಲೂಕು ಕೋಶಾಧಿಕಾರಿ ಕಮಲ ಕೊಕ್ಕಡ,ಭಾರತಿ ಹೊಸ್ತೋಟ,9 ವಲಯದ ಸಂಚಾಲಕರು,ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.