ಎಂ.ಡಿ/ಎಂ.ಎಸ್ ಪರೀಕ್ಷೆಯಲ್ಲಿ ಡಾ.ದೀನಮಂಜು ಶೆಟ್ಟಿಗೆ 2ನೇ ರ್‍ಯಾಂಕ್

ಬೆಳ್ತಂಗಡಿ: ಕಳೆದ ಸಾಲಿನಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ್ದ ಸ್ನಾತಕೋತ್ತರ ಪದವಿಯ ಆಯುರ್ವೇದ ವಿಭಾಗದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ದೀನಮಂಜು ಶೆಟ್ಟಿ ಅವರು ಮಾಸ್ಟರ್ ಆಫ್ ಸರ್ಜರಿ(ಇಎನ್‌ಟಿ) ಯಲ್ಲಿ ವಿಶ್ವವಿದ್ಯಾಲಯಕ್ಕೆ ಎರಡನೇ ರ್‍ಯಾಂಕ್ ಪಡೆದಿದ್ದಾರೆ. 

ಡಾ.ದೀನಮಂಜು ಶೆಟ್ಟಿ ಅವರು ಧರ್ಮಸ್ಥಳದ ದಿನೇಶ್ ಶೆಟ್ಟಿ ಹಾಗೂ ಸಾರಿಕಾ ಶೆಟ್ಟಿಯವರ ಪುತ್ರಿಯಾಗಿದ್ದು, ಅವರು ಪ್ರಸ್ತುತ ಬೆಳ್ತಂಗಡಿಯ ಲಾಯಿಲಾದಲ್ಲಿರುವ ಪ್ರಸನ್ನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಕನ್ಸ್‌ಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.