“ಉತ್ತಿಷ್ಠ ಸೇವಾ ಪುರಸ್ಕಾರ 2020” ಸೇವಾಭಾರತಿ ಕನ್ಯಾಡಿಯ ಅಂಗ ಸಂಸ್ಥೆ ಸೇವಾಧಾಮದ ಮಡಿಲಿಗೆ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಸೇವಾಭಾರತಿ ಸಂಸ್ಥೆಗೆ ಉತ್ತಮ ಸಮಾಜ ಸೇವೆಗಾಗಿ ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದ್ದು ಇದೀಗ ಮತ್ತೊಂದು ಪ್ರಶಸ್ತಿಯ ಗರಿಯನ್ನು ತನ್ನ ಮಡಿಲಿಗೆ ಪಡೆದುಕೊಂಡಿದೆ.

ಸದಾ ಸೇವಾ ಚಟುವಟಿಕೆಗಳ ಕಾರ್ಯದಲ್ಲಿ ತೊಡಗಿಕೊಂಡ ಸೇವಾಭಾರತಿ ಕನ್ಯಾಡಿಯು ತನ್ನ ಅಂಗ ಸಂಸ್ಥೆಗಳನ್ನು ಕಟ್ಟಿಕೊಂಡು ಸಮಾಜೊನ್ಮುಖ ಕಾರ್ಯದಲ್ಲಿ ಮುನ್ನಡೆಯುತ್ತಿದೆ. ಸೇವಾಭಾರತಿ ಸಂಸ್ಥೆಯ ಅಂಗ ಸಂಸ್ಥೆಯಾಗಿ, ಬೆನ್ನು ಮೂಳೆ ಮುರಿತಕ್ಕೊಳಗಾದವರಿಗೆ ಸಾಮಾಜಿಕ ಪುನಶ್ಚೇತನ ಕೇಂದ್ರವಾದ “ಸೇವಾಧಾಮ” ವು ಕೊಕ್ಕಡದ ಶ್ರೀಕ್ಷೇತ್ರ ಸೌತಡ್ಕ ದೇವಸ್ಥಾನದ ಎದುರಿನಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆನ್ನು ಮೂಳೆ ಮುರಿತಕ್ಕೊಳಗಾದವರಿಗಾಗಿ ಸೇವಾಧಾಮ!
ಭರವಸೆ ಕಳೆದುಕೊಂಡವರಿಗೆ ಚೈತನ್ಯ ನೀಡುವ ಪುಣ್ಯಧಾಮ!

“ಸೇವೆಯೇ ಪರಮೋಚ್ಚ ಧರ್ಮ” ಎಂಬಂತೆ
ಭಾರತದೆಲ್ಲೆಡೆ ತಮ್ಮ ವಿಶಿಷ್ಟ ಕಾರ್ಯವೈಖರಿಯ ಮೂಲಕ ತನ್ನ ಹೆಸರನ್ನು ಪಸರಿಸುವಂತೆ ಹಲವಾರು ಸಮಾಜಮುಖಿ ಸೇವೆ ಕೈಗೊಂಡ ಸೇವಾಭಾರತಿ(ರಿ)ಕನ್ಯಾಡಿ ಇದರ ಅಂಗ ಸಂಸ್ಥೆ, ಸೇವಾಧಾಮಕ್ಕೆ ಬೆಂಗಳೂರಿನ ಉತ್ತಿಷ್ಠ ಫೌಂಡೇಶನ್ ವತಿಯಿಂದ ಉತ್ತಮ ಸಮಾಜ ಸೇವೆಯನ್ನು ಗುರುತಿಸಿ ಬೆಂಗಳೂರಿನ ಇಂದಿರಾನಗರದ ಸಂಗೀತ ಸಭಾ ದಲ್ಲಿ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ “ಉತ್ತಿಷ್ಠ ಸೇವಾ ಪುರಸ್ಕಾರ 2020” ಹಾಗೂ ದತ್ತಿನಿಧಿ ರೂಪಾಯಿ ಒಂದು ಲಕ್ಷವನ್ನು ನೀಡಿ ಗೌರವಿಸಲಾಯಿತು.

ಇಸ್ರೋ ಅಧ್ಯಕ್ಷರಾದ ಡಾ.ಕೆ. ಶಿವನ್ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು.

ಸೇವಾ ಭಾರತಿ ಕನ್ಯಾಡಿ ಇದರ ಅಧ್ಯಕ್ಷರಾದ ವಿನಾಯಕ ರಾವ್ ಕನ್ಯಾಡಿ ಮಾತನಾಡಿ “ತ್ಯಾಗ ಮತ್ತು ಸೇವೆ” ಭಾರತದ ಆತ್ಮ ಎನ್ನುವ ವಿವೇಕಾನಂದರ ನುಡಿಯ ಆಶಯಗಳನ್ನು ಆಳವಡಿಸಿಕೊಂಡು ಹಲವು ಸಂಘಟನೆಗಳ ಒಗ್ಗೂಡುವಿಕೆಯಿಂದ ಐದಾರು ಜಿಲ್ಲೆಗಳ ಸುಮಾರು ೨೦೦೦ ಕ್ಕಿಂತಲೂ ಹೆಚ್ಚಿನ ಬೆನ್ನುಮೂಳೆ ಮುರಿತಕ್ಕೊಳಗಾದವರ ಆತ್ಮ ಸ್ಥೈರ್ಯ ಹಾಗೂ ಧೈಹಿಕ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಸೇವಾಧಾಮವನ್ನು ಸೌತಡ್ಕದಲ್ಲಿ ಪ್ರಾರಂಭಿಸಲು ಕೊಡುಗೈದಾನಿಗಳ ಹಾಗೂ ಸಂಘಟನೆಯ ಕಾರ್ಯಕರ್ತರುಗಳ ಸೇವೆ ಅಪಾರವಾದದ್ದು, ಈ ಸಂಸ್ಥೆಯಲ್ಲಿ ಹಲವು ತರಬೇತಿಗಳ ಮೂಲಕ ಸಂತ್ರಸ್ಥರಿಗೆ ಸಶಕ್ತವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಈ ಸಂಸ್ಥೆಯ ಮೂಲಕ ಪ್ರೇರಣೆಯನ್ನು ನೀಡಲಾಗುತ್ತಿದೆ. ಇಂದಿನ ಈ ಪುರಸ್ಕಾರವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾಕಾರ್ಯ ಮಾಡಲು ಪ್ರೇರಣೆಯಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಆರ್.ಎಸ್.ಎಸ್.ಪ್ರಮುಖರಾದ ಕೃಷ್ಣ ಭಟ್ ಕೊಕ್ಕಡ, ಸೇವಾಧಾಮದ ನಿರ್ದೇಶಕರಾದ ರಾಯನ್ ಪೆರ್ನಾಂಡಿಸ್, ಸೇವಾಭಾರತಿ ಕಾರ್ಯಕರ್ತರುಗಳಾದ ರಾಜೇಂದ್ರ ಕುಮಾರ್ ಕಲ್ಮಂಜ, ಶಶಿಧರ ಕಲ್ಮಂಜ, ರಾಜಶೇಖರ ಹೆಬ್ಬಾರ್, ಗಣೇಶ್ ಬಜಿಲ ಕನ್ಯಾಡಿ, ಚಂದನ್ ಗುಡಿಗಾರ್, ಹರ್ಷಿತಹೆಗ್ಡೆ, ವಸಂತಿಗೌಡ ,ರಜತ್, ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.