ಸೈನಿಕನ ಐಡೆಂಟಿಟಿ ಕಾರ್ಡ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕರು

ಬೆಳ್ತಂಗಡಿ: ಸೇನೆಯ ಕರ್ತವ್ಯದಐಡೆಂಟಿಟಿ ಕಾರ್ಡ್ ಸಹಿತ ನಗದು ಇದ್ದ ಪರ್ಸ್ ಕಳೆದುಕೊಂಡಿದ್ದ ಸೈನಿಕರೊಬ್ಬರ ದಾಖಲೆ ಪತ್ರಗಳಿದ್ದ ಪರ್ಸ್ ಮತ್ತೆ ಅವರ ಕೈ ಸೇರಿದೆ.
ಕಡಬ ತಾಲೂಕಿನ ಇಚ್ಲಂಪಾಡಿ ನಿವಾಸಿ ಸಂದೀಪ್ ಅವರು ಭಾರತೀಯ ಸೈನ್ಯದಲ್ಲಿ ೧೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು. ಸಂದೀಪ್ ಅವರ ಪತ್ನಿ ಲಾಯಿಲ ಗ್ರಾಮದ ಸೈಂಟ್ ಮೇರಿಸ್ ಶಾಲಾ ಶಿಕ್ಷಕಿ. ರಜೆಯ ನಿಮಿತ್ತ ಬಂದಿದ್ದ ಸಂದೀಪ್‌ರವರು ಪತ್ನಿಯೊಂದಿಗೆ ಫೆ.೨೧ ರಂದು ಬೆಳ್ತಂಗಡಿಗೆ ಬಂದಾಗ ಬಸ್ ನಿಲ್ದಾಣದಲ್ಲಿ ಪರ್ಸ್ ಕಳೆದುಕೊಂಡಿದ್ದರು. ಈ ನಿಮಿತ್ತ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೂಡಿಗೆರೆ ಸಾರ್ವಜನಿಕ ಶೌಚಾಲಯದ ಕಿಟಕಿಯಲ್ಲಿ ಸಿಕ್ಕಿದ್ದ ಐಡೆಂಟಿಟಿ ಕಾರ್ಡ್ ಅನ್ನು ಗಮನಿಸಿದ್ದ ಮೂಡಿಗೆರೆಯ ರಾಷ್ಟ್ರೀತ್, ಶರತ್ ಮತ್ತು ಸಂತೋಷ್ ಶೆಟ್ಟಿ ಎಂಬವರು ಇದನ್ನು ಮೂಡಿಗೆರೆ ಠಾಣೆಗೆ ಹಸ್ತಾಂತರಿಸಿದ್ದರು. ಸಿಸಿ ಟಿ.ವಿ ಆಧರಿಸಿ ತನಿಖೆ ನಡೆಸುತ್ತಿದ್ದ ವೇಳೆ ಸದ್ರಿ ವಿಚಾರ ತಿಳಿದುಕೊಂಡ ಬೆಳ್ತಂಗಡಿ ಎಸ್.ಐ ನಂದ ಕುಮಾರ್ ಅವರು ಮೂಡಿಗೆರೆ ಠಾಣೆಯಿಂದ ಇದನ್ನು ಬೆಳ್ತಂಗಡಿಗೆ ತರಿಸಿ, ಕಾರ್ಡ್ ಕಳೆದುಕೊಂಡಿದ್ದ ಸಂದೀಪ್ ಅವರಿಗೆ ಹಸ್ತಾಂತರಿಸಿದರು.
ಬೆಳ್ತಂಗಡಿ ಠಾಣೆಯಲ್ಲಿ ಯುವಕರಿಗೆ ಅಭಿನಂದನೆ:
ಐಡೆಂಟಿಟಿ ಕಾರ್ಡ್ ಕಳೆದು ಹೋದಲ್ಲಿ ಸೈನ್ಯದ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಎದುರಿಸಬೇಕಾಗಿತ್ತು. ಇದರಿಂದ ನೊಂದಿದ್ದ ಸಂದೀಪ್ ಅವರು, ತನ್ನ ಕಾರ್ಡ್ ಮರಳಿಸಿ ಪ್ರಾಮಾಣಿಕತೆ ಮೆರೆದು ಪರೋಕ್ಷವಾಗಿ ನೆರವಾದ ಸದ್ರಿ ಮೂರೂ ಮಂದಿ ಯುವಕರನ್ನು ಮೂಡಿಗೆರೆಯಿಂದ ಬೆಳ್ತಂಗಡಿ ಠಾಣೆಗೆ ಕರೆಸಿ ಪೊಲೀಸರ ಸಮ್ಮುಖ ಅವರನ್ನು ಗುರುತಿಸಿ ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.