ಯುವ ಮರಾಠಿ ಸೇವಾ ಸಂಘ ಮಾಸಿಕ ಸಭೆ

ಬೆಳ್ತಂಗಡಿ: ತಾಲೂಕು ಯುವ ಮರಾಠಿ ಸೇವಾ ಸಂಘ ಇದರ ಜನವರಿ ತಿಂಗಳ ಮಾಸಿಕ ಸಭೆಯು ಸಂಘದ ಉಪಾಧ್ಯಕ್ಷ ವಸಂತ್ ನಾಯ್ಕ್ ಮುಂಡಾಜೆ ಇವರ ನೇತೃತ್ವದಲ್ಲಿ ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಇಲ್ಲಿ ನಡೆಸಲಾಯಿತು.

ಸಂಘದ ಕೋಶಾಧಿಕಾರಿ ಪ್ರಜ್ವಲ್ ಕಣಿಯೂರು ಸ್ವಾಗತಿಸಿದರು ಸಂಘದ ಗತಸಭೆಯ ವರದಿಯನ್ನು ಪ್ರಶಾಂತ್ ನಾಯ್ಕ್ ತೆಂಕಕಾರಂದೂರು ಮಂಡಿಸಿದರು. ಮರಾಠಿ ಕ್ರೀಡಾಕೂಟದ ಲೆಕ್ಕಪತ್ರ ಮಂಡನೆಯ ಬಗ್ಗೆ ಚರ್ಚಿಸಲಾಯಿತು. ಮರಾಟಿ ಕ್ರೀಡಾಕೂಟದಲ್ಲಿ ಉತ್ತಮವಾಗಿ ಸಹಕರಿಸಿದ ಸಂಘದ ಎಲ್ಲಾ ಪದಾಧಿಕಾರಿ ಮಿತ್ರ ವರ್ಗದವರನ್ನು ಉಪಾಧ್ಯಕ್ಷರು ಅಭಿನಂದಿಸಿದರು.

ಮುಂದಿನ ದಿನಗಳಲ್ಲಿ ಸಂಘವನ್ನು ಸದೃಢ ಗೊಳಿಸುವ ಬಗ್ಗೆ ಉಪಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಚರ್ಚಿಸಿದರು ಸಂಘದ ಉಪಾಧ್ಯಕ್ಷ ವಸಂತ ನಾಯ್ಕ ಮುಂಡಾಜೆ ಇವರನ್ನು ಅಭಿನಂದಿಸಲಾಯಿತು. ಧನ್ಯವಾದವನ್ನು ಶರತ್ ಕುಮಾರ್ ಗೇರುಕಟ್ಟೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.