‘ಮಹಿಳಾಪರ ಕಾನೂನು ದುರುಪಯೋಗ ಆತಂಕಕಾರಿ’

ಉಜಿರೆ: ಹೆಣ್ಣುಮಕ್ಕಳ ಪರವಾಗಿ ಅಸ್ತಿತ್ವದಲ್ಲಿರುವ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮನಸ್ಥಿತಿ ಆತಂಕಕಾರಿ ಎಂದು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶ ಫೆ.೧೫ ರಂದು ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ದೌರ್ಜನ್ಯ ತಡೆ ಹಾಗೂ ಸಬಲೀಕರಣ’ ಕುರಿತು ಅವರು ಮಾತನಾಡಿದರು.

ಮದುವೆಯಾದ ನಂತರ ಹೊಸ ಕೌಟುಂಬಿಕ ವಾತಾವರಣ ಪ್ರವೇಶಿಸಿದ ನಂತರ ಹೊಂದಾಣಿಕೆಗೆ ಸಂಬಂಧಿಸಿದಂತೆ ಸಹಜವಾಗಿಯೇ ಎದುರಾಗುವ ಸಮಸ್ಯೆಯನ್ನೇ ನೆಪವಾಗಿಸಿಕೊಂಡು ವಿವಾಹಿತ ಮಹಿಳೆಯರು ಪತಿಯ ಕುಟುಂಬದ ಸದಸ್ಯರ ವಿರುದ್ಧ ಸುಳ್ಳು ದೂರುಗಳನ್ನು ನೀಡುತ್ತಾರೆ. ತಮ್ಮ ಪರವಾಗಿ ಇರುವ ಕಾನೂನನ್ನು ಹೆಣ್ಣುಮಕ್ಕಳು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಶುಭಾರಾಣಿ ಸ್ವಾಗತಿಸಿದರು. ರಕ್ಷಾ ನಿರೂಪಿಸಿದರು. ಅಮ್ರೀನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.