ವಿದ್ಯಾರ್ಥಿ ದೆಸೆಯಲಿ ಸಾಧನೆ ಮುಖ್ಯ

ಪುಂಜಾಲಕಟ್ಟೆ :ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಯುವಜನತೆಯ ಮೇಲೆ ಸಾಮಾಜಿಕ ಜಾಲತಾಣಗಳ ಪಾತ್ರ ವಿಷಯದ ಬಗ್ಗೆ ಕಾರ್ಯಕ್ರಮವು ಫೆ.೧೦ ರಂದು ಜರುಗಿತು.
ಲೇಡಿಗೋಷನ್ ಆಸ್ಪತ್ರೆಯ ಆಪ್ತ ಸಲಹೆಗಾರರಾದ ಹರ್ಷಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಒಂದು ಕ್ಷಣದ ತಪ್ಪು ಬದುಕನ್ನೇ ಸರ್ವ ನಾಶ ಮಾಡಬಲ್ಲದು .ಹದಿಹರೆಯದಲ್ಲಿ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವುದು ಅತ್ಯಗತ್ಯ. ಸಿನೇಮಾ ನೋಡಿ ಬದುಕನ್ನು ಸಿನಿಮಾವಾಗಿಸುವ ಹುಚ್ಚು ಪ್ರಯತ್ನ ಮುಂದೆ ಬದುಕನ್ನು ಬುಡಮೇಲು ಮಾಡುತ್ತದೆ .ಎಲ್ಲರೂ ಹೆಮ್ಮೆ ಪಡುವಂಥ ಸಾಧನೆ ಮಾಡಿ ಎಂದು ಹರ್ಷಿತಾರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ, ಪ್ರಾಧ್ಯಾಪಕರಾದ ದೀಕ್ಷಿತಾ ವರ್ಕಾಡಿ, ಗೀತಾ .ಎಸ್, ರವಿಶಂಕರ್. ಬಿ ರವರು ಉಪಸ್ಥಿತರಿದ್ದರು .ಅನುಷಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.