SDPi ಬೆಳ್ತಂಗಡಿ ವತಿಯಿಂದ ಗ್ರಾಮ ಪಂಚಾಯತ್ ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆ

ಬೆಳ್ತಂಗಡಿ  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಭಾವಿ ಸಿದ್ದತಾ ಸಭೆ ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ನವಾಝ್ ಶರೀಪ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಪೆ. 23 ರಂದು ನಡೆಯಿತು.

ವೀಕ್ಷಕರಾಗಿ SDPi ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ S.H ಆಗಮಿಸಿದ್ದರು. ಏಳು ಜನರ ಚುನಾವಣಾ ಸಮಿತಿಯನ್ನು ರಚಿಸಲಾಯಿತು. ಮುಂದಿನ ಬೆಳ್ತಂಗಡಿ ಅಸೆಂಬ್ಲಿಯ ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿಯಾಗಿ ಅಕ್ಬರ್ ಬೆಳ್ತಂಗಡಿಯವರನ್ನು ನೇಮಿಸಲಾಯಿತು. ಸಭೆಯಲ್ಲಿ ಅಸೆಂಬ್ಲಿ ನಾಯಕರು, ತಾಲೂಕಿನ ಎಲ್ಲಾ ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.