ಹೊಸಂಗಡಿ; 2020 ಮಾರ್ಚ್ 24 ಕ್ಕೆ ಪೆರಿಂಜೆ ಸಂತೃಪ್ತಿ ಸಭಾಂಗಣದಲ್ಲಿ ಜರುಗಲಿರುವ ಬೆಳ್ತಂಗಡಿ ತಾಲೂಕು17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಗ್ಗೆ ಸಮಾಲೋಚನಾ ಸಭೆ ಫೆ.21 ರಂದು ನಡೆಯಿತು. ಈ ಸಂದರ್ಭ ಸಂಪಾದಕ ಮಂಡಳಿಯ ಪಟ್ಟಿ ಅಂತಿಮಗೊಳಿಸಲಾಯಿತು.
ಗೌರವ ಸಂಪಾದಕರಾಗಿ ಪ್ರದೀಪ ಕುಮಾರ ಕಲ್ಕೂರ, ಪ್ರಧಾನ ಸಂಪಾದಕರಾಗಿ ಡಾ.ಬಿ ಯಶೋವರ್ಮ, ಸಂಪಾದಕರಾಗಿ ಶಂಕರ್ ಭಟ್ ಬಾಲ್ಯ, ಸಹ ಸಂಪಾದಕರುಗಳಾಗಿ ಗ್ರಾ.ಪಂ ಸದಸ್ಯರಾದ ಹರಿಪ್ರಸಾದ್ ಮತ್ತು ಅಕ್ಬರಾಲಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಎಮ್. ಪಿ. ಶ್ರೀನಾಥ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕೆ. ರಾಮಕೃಷ್ಣ ಭಟ್ ಬೆಳಾಲು ಮತ್ತು ಅಚ್ಚು ಮುಂಡಾಜೆ, ಡಾ. ಯೊಗೀಶ್ ಕೈರೊಡಿ, ರಾಜೇಶ್ ನೆಲ್ಯಾಡಿ, ಹರೀಶ್ ಆದೂರು ಮತ್ತು ಡಾ. ದಿವಾ ಕೊಕ್ಕಡ ಇವರ ಸಮಿತಿಯನ್ನು ಅಂತಿಮಗೊಳಿಸಲಾಯಿತು.ನಡೆದ ಸಭೆಯ ಅಧ್ಯಕ್ಷತೆಯನ್ನು ಶಂಕರ್ ಭಟ್ ವಹಿಸಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಜಿ.ಪ ಸದಸ್ಯ ಪಿ. ಧರಣೇಂದ್ರ ಕುಮಾರ್, ಸಂಚಾಲಕ ಇಸ್ಮಾಯಿಲ್ ಕೆ ಪೆರಿಂಜೆ ಮೊದಲಾದವರು ಉಪಸ್ಥಿತರಿದ್ದರು.