HomePage_Banner_
HomePage_Banner_
HomePage_Banner_

ಪೆರ್ಮುಡ ಕಂಬಳದಲ್ಲಿ ಕಳವಾದ ಬೈಕ್ ಆರೋಪಿ ಸಹಿತ ಪತ್ತೆ

ವೇಣೂರು: ಕಳೆದ ರವಿವಾರ ಬೆಳ್ತಂಗಡಿ ತಾಲೂಕಿನ ಪೆರ್ಮುಡ ಕಂಬಳದಲ್ಲಿ ಕಳವಾಗಿದ್ದ ಬೈಕ್ ಗುರುವಾರ ವೇಣೂರು ಪೆಟ್ರೋಲ್ ಪಂಪ್ ಬಳಿ ಪತ್ತೆಯಾಗಿದ್ದು, ಅಪ್ರಾಪ್ತ ಆರೋಪಿ ಪೊಲೀಸರ ವಶವಾಗಿದ್ದಾನೆ.

ಗುರುವಾರ ಸಂಜೆ ವೇಣೂರು ಬಳ್ಳಾಲ್ ಪೆಟ್ರೋಲ್ ಪಂಪ್ ಬಳಿಯ ಸರ್ವಿಸ್ ಸ್ಟೇಷನ್‌ನಲ್ಲಿ ಆರೋಪಿಯು ಬೈಕನ್ನು ವಾಶ್ ಮಾಡಲೆಂದು ತಂದಿರಿಸಿದ್ದ. ಈ ವೇಳೆ ಸಂಶಯಗೊಂಡ ವ್ಯಕ್ತಿಯೊಬ್ಬರು ವಾಟ್ಸಪ್‌ನಲ್ಲಿ ಹರಿದಾಡಿದ್ದ ಕಳವಾದ ಬೈಕಿನ ನಂಬರನ್ನು ಗಮಿಸಿದಾಗ ಅದೇ ನಂಬರ್ ಇರುವುದು ಗೊತ್ತಾಗಿದೆ.

ಈ ವೇಳೆ ಪೆಟ್ರೋಲ್ ಪಂಪ್‌ನ ಸಿಸಿಟಿವಿಯನ್ನು ಸ್ಥಳೀಯರು ಗಮನಿಸುತ್ತಿದ್ದಾಗ ಆರೋಪಿಯು ಅಲ್ಲಿಗೆ ಬಂದು ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಒಳಹೊಕ್ಕಿದ್ದ. ಈ ವೇಳೆ ಸ್ಥಳೀಯರು ತಕ್ಷಣ ವೇಣೂರು ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯು ತಪ್ಪಿಸಿಕೊಳ್ಳದಂತೆ ಗಮನಿಸಿದ್ದರು. ಇದೀಗ ಪೊಲೀಸರು ಬೈಕ್ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಬಾಲಪರಾಧ ಪ್ರಕರಣದಡಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.