ವಿಷ್ಣು ಸಹಸ್ರನಾಮ ಜಯಂತಿ ಆಚರಣೆ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ

Advt_NewsUnder_1
Advt_NewsUnder_1

ಭೀಷ್ಮ ಏಕಾದಶಿ ಮತ್ತು ವಿಷ್ಣುಸಹಸ್ರ ನಾಮ ಜಯಂತಿ ಆಚರಣಿ ಪ್ರಯುಕ್ತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೂತನ ವಧೂ ವರರ ಭಾಗವಹಿಸುವಿಕೆಯೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಬೋಧನೆ ಮಾಡಿದ ಮಾಘ ಮಾಸದ ಏಕಾದಶಿಯ ಈ ಪವಿತ್ರ ದಿನವನ್ನು ಸಾಮೂಹಿಕವಾಗಿ ವಿಷ್ಣು ಸಹಸ್ರನಾಮ ಪಠಣವನ್ನು ಕೃಷ್ಣನ ಸನ್ನಿಧಾನದಲ್ಲಿ ಮೂಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಂತರ ನಡೆದ ತೋನ್ಸೆ ಪುಷ್ಕಳಕುಮಾರ್ ಬಳಗದವರು ಶ್ರೀ ಕೃಷ್ಣ ಸುಧಾಮ ಎನ್ನುವ ಹರಿಕಥೆಯು ಭಕ್ತರನ್ನು ಮಂತ್ರ ಮುಗ್ಧಗೊಳಿಸಿತು.ಇಂದಿನ ದಿನಗಳಲ್ಲಿಯೂ ಹರಿಕಥೆಯು ಭಕ್ತರನ್ನು ಆಕರ್ಷಿಸಬಲ್ಲದು ಎನ್ನುವುದನ್ನು ನಾವೂರು ಮತ್ತು ಪರಿಸರದ ಸಹಸ್ರಾರು ಭಕ್ತರು ತೋರಿಸಿ ಕೊಟ್ಟರು.

ಸನ್ನಿಧಿಯಲ್ಲಿ ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರಗಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರು ,ಎಲ್ಲಾ ಪದಾಧಿಕಾರಿಗಳು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ಧರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.