HomePage_Banner_
HomePage_Banner_

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಅಧೀಕ್ಷಕರಾಗಿರುವ ದಿಡುಪೆಯ ಉಮೇಶ್ ಗೌಡ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಕುಗ್ರಾಮ ಮಲವಂತಿಗೆ ಗ್ರಾಮದ ನಂದಿಕಾಡು ಪ್ರದೇಶ. ಕಳೆದ ಬಾರಿಯ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಧರೆ ಬಿರುಕುಬಿಟ್ಟು ಅಪಾಯ ಎದುರಿಸುತ್ತಿರುವ ಪ್ರದೇಶ. ೨೫ ವರ್ಷಗಳ ಹಿಂದೆ ಇಲ್ಲಿಗೆ ರಸ್ತೆ, ವಿದ್ಯುತ್, ದೂರವಾಣಿ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕುಗ್ರಾಮ. ಇದ್ದ ಮಣ್ಣಿನ ರಸ್ತೆಯಲ್ಲಿ ಸೀಮಿತವಾಗಿದ್ದ ವಾಹನಕ್ಕಾಗಿ ಒಂದಷ್ಟು ಕಿ.ಮೀಟರ್ ಪ್ರತಿದಿನ ಕಾಲ್ನಡಿಗೆಯಲ್ಲಿ ಬಂದು ಬಳಿಕ ಉಜಿರೆಯ ಕಾಲೇಜು ಮೆಟ್ಟಿಲು ಹತ್ತಿದ್ದು ಹಳೇ ನೆನಪು, ಕೃಷಿ ಕುಟುಂಬದ ಬಡತನದ ಹಿನ್ನೆಲೆಯ ವಾತಾವರಣದಲ್ಲಿ ದಿನಕಳೆಯುತ್ತಾ, ತಮ್ಮ ಕಾಲೇಜು ಸಮಯದಲ್ಲಿ ಬೆಳಗ್ಗೆ ೭ಕ್ಕೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುತ್ತಿದ್ದುದು ರಾತ್ರಿ ೭ ಗಂಟೆಗೆ ಅಥವಾ ಅದರ ನಂತರ  ಹೀಗೆ ಸಂಕಷ್ಟದ ಬದುಕು ಎದುರಿಸಿ ಜೀವನದಲ್ಲಿ ಗುರಿ ತಲುಪಿರುವ ಇಲ್ಲಿನ ಉಮೇಶ್ ಗೌಡ ಅವರು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಅಧೀಕ್ಷಕ. ಇದು ನಿಜವಾಗ್ಯೂ “ಹಳ್ಳಿ ಹೈದ ಪ್ಯಾಟೆ ಹೀರೋ” ಎಂದರೆ ಖಂಡಿತಾ ತಪ್ಪಲ್ಲ!

ರುಕ್ಮಿಣಿ ಮತ್ತು ದಿ. ಕುಂಜಿರ ಗೌಡ ದಂಪತಿ ಪುತ್ರರಾಗಿರುವ ಉಮೇಶ್ ಗೌಡ ದಿಡುಪೆ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಂಗಾಡಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ವೃತ್ತಿ ಅರಸಿ ಸಿಲಿಕಾನ್ ಸಿಟಿ ಬೆಂಗಳೂರು ಬಸ್ಸು ಹತ್ತಿದವರು. ಅಲ್ಲಿ ಖಾಸಗಿ ವೃತ್ತಿ ಹಿಡಿದರೂ, ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂಬ ಛಲ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ, ಸ್ನಾತಕೋತ್ತರ ಡಿಪ್ಲೋಮಾ ಪದಿವ ಶಿಕ್ಷಣ ಪೂರೈಸುವಂತೆ ಮಾಡಿತು.
ವೃತ್ತಿ ಜೀವನದಲ್ಲಿ ಸಿಕ್ಕ ಅವಕಾಶ ಮತ್ತು ಪ್ರೋತ್ಸಾಹವನ್ನು ಬಳಸಿಕೊಂಡ ಅವರು ಸಹಾಯಕ ಹುದ್ದೆಯೊಂದಿಗೆ ಸರಕಾರ ವೃತ್ತಿ ಪ್ರಾರಂಭಿಸಿದವರು ಇಂದು ಉನ್ನತ ಹುದ್ದೆಗೆ ಏರಿದ್ದಾರೆ.
ಸಿಇಟಿ ಪರೀಕ್ಷೆ, ಸೀಟು ಹಂಚಿಕೆ, ಉದ್ಯೋಗ ನೇಮಕಾತಿ ಪರೀಕ್ಷೆ ಕೈಗೊಳ್ಳುವ ಮಹತ್ತರ ಜವಾಬ್ಧಾರಿ:
ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಆರ್ಕಿಟೆಕ್ಚರ್, ಭಾರತೀಯ ವೈದ್ಯ ಪದ್ದತಿಯಾದ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ, ಬಿ. ಫಾರ್ಮ ಮತ್ತು ಡಿ ಫಾರ್ಮಾ ಮುಂತಾದ ಫಾರ್ಮ್‌ಸೈನ್ಸ್ ಸೀಟುಗಳ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಾದ್ಯಂತದಿಂದ ಬರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರದಲ್ಲಿ ಉಮೇಶ್ ಅವರದ್ದು ಪ್ರಮುಖ ಪಾತ್ರ. ಸರಕಾರ ವಹಿಸುವ ಇಲಾಖಾ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದು, ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡುವುದು, ಸರಕಾರಿ ನೇಮಕಾತಿ ಪರೀಕ್ಷೆ ನಡೆಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ನಡೆಸುವುದು ನೇಮಕಾತಿ ಕೈಗೊಳ್ಳುವುದು ಇವರ ವ್ಯಾಪ್ತಿಗೆ ಬರುವ ಕೆಲಸ. ರಾಜ್ಯಮಟ್ಟದಲ್ಲಿ ಪ್ರತೀ ವರ್ಷ ೪೦ ರಿಂದ ೫೦ ಸಾವಿರ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ತೆರೆಯುವ ಭಾಗ್ಯ ಪಡೆದ ಅವರ ಸೇವೆಗೆ ಈಗ ೨೪ ವರ್ಷ.
ಮಾಹಿತಿ ಕಾರ್ಯಾಗಾರ:
ಪರೀಕ್ಷಾ ಪ್ರಾಧಿಕಾರದಲ್ಲಿ ಉತ್ತಮ ಹುದ್ದೆಯಲ್ಲಿರುವ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು, ತನ್ನ ಬಳಿ ಬರುವ ಪ್ರತಿಯೊಬ್ಬರಿಗೂ ಮಾಹಿತಿ ಮತ್ತು ತಮ್ಮ ಅನುಭವದ ಸಂಪನ್ಮೂಲವನ್ನು ಧಾರೆ ಎರೆಯುತ್ತಿದ್ದಾರೆ. ಅನೇಕ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಭವಿಷ್ಯದ ಭರವಸೆಯ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಸಮಯದ ಹೊಂದಾಣಿಕೆ ಅನುಸರಿಸಿ ಅವರು ಮಾಹಿತಿ ಕಾರ್ಯಾಗಾರಗಳಲ್ಲಿ ಭಾಗಿಯಾಗ ಜಾಗೃತಿ ಮೂಡಿಸುವ ಕೈಂಕಾರ್ಯವನ್ನೂ ಮಾಡಿದ್ದಾರೆ.

ಪಿಯುಸಿಯಲ್ಲಿ ಪಠ್ಯ ಕ್ರಮದ ಮೇಲೆ ಕಠಿಣ ಅಭ್ಯಾಸ ನಡೆಸಿದರೆ ಸಾಕು:
ಉಮೇಶ್ ಅವರ ಅನುಭವದ ಮಾತಿನಂತೆ, ವಿದ್ಯಾರ್ಥಿಗಳು ಪಿಯುಸಿಯ ತಮ್ಮ ಶೈಕ್ಷಣಿಕ ಅವಧಿಯಲ್ಲಿ ಪಠ್ಯದ ಮೇಲೆ ವಿಶೇಷ ಗಮನವಿಟ್ಟು ಅಭ್ಯಾಸ ನಡೆಸಿದರೆ ಸಾಕು. ಭವಿಷ್ಯದ ಯಾವುದೇ ಹಂತಕ್ಕೂ ಅವರು ಅಣಿಯಾದಂತೆ ಎನ್ನುತ್ತಾರೆ. ಪ್ರಸ್ತುತ ನೀಟ್ ಪರೀಕ್ಷೆಯನ್ನು ಕೇಂದ್ರ ಸರಕಾರ ನಡೆಸುತ್ತಿದ್ದು ಇದರಲ್ಲಿ ಗ್ರಾಮಾಂತರ ಭಾಗದಿಂದ ಬರುವ ವಿದ್ಯಾರ್ಥಿಗಳು ಸ್ವಲ್ಪ ಪ್ರಮಾಣದಲ್ಲಿ ಕೌಶಲ್ಯದ ಕೊರತೆಯಿಂದ ಗುರಿ ತಲುಪುವಲ್ಲಿ ಎಡವುತ್ತಿದ್ದಾರೆ. ಇದರ ಲಾಭವನ್ನು ಟ್ಯೂಷನ್ -ಕೋಚಿಂಗ್ ಸೆಂಟರ್‌ಗಳು ಪಡೆಯುತ್ತಿವೆ ಎನ್ನುತ್ತಾರೆ.
ಮಾಹಿತಿ ಪತ್ರಗಳ ಮೂಲಕ ಪ್ರಚಾರ:
ತಮ್ಮ ಪರೀಕ್ಷಾ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಈಗಾಗಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳ ಮೂಲಕ, ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಕರಪತ್ರದ ಮೂಲಕ, ಉಪನ್ಯಾಸಕರಿಗೆ ಮಾಹಿತಿ ನೀಡುವ ಮೂಲಕ, ಜೊತೆಗೆ ವೆಬ್‌ಸೈಟ್ ಮೂಲಕವೂ ಪರೀಕ್ಷಾ ಪ್ರಾಧಿಕಾರದ ಸಂಪೂರ್ಣ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ. ಪ್ರಾಧಿಕಾರ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಉತ್ತರಿಸಿದ ಉತ್ತರಪತ್ರಿಕೆ ಪ್ರತಿಯನ್ನು ಸ್ಥಳದಲ್ಲೇ ಅಭ್ಯರ್ಥಿಗೆ ನೀಡಲಾಗುತ್ತಿದೆ. ಹಾಗೂ ಪರೀಕ್ಷಾ ನಂತರ ಈ ಉತ್ತರಗಳನ್ನು ವೆಬ್‌ಸೈಟ್ ಮೂಲಕವೂ ಮುಕ್ತವಾಗಿ ಪ್ರಕಟಿಸಿ ಪಾರದರ್ಶಕತೆ ಪಾಲಿಸಲಾಗುತ್ತಿದೆ.
ಹಾಗೂ ಪ್ರಕಟವಾದ ಉತ್ತರದ ಬಗ್ಗೆ ಗೊಂದಲಗಳಿದ್ದರೆ ನಿಗಧಿತ ಸಮಯದೊಂದಿಗೆ ಸರಿಯಾದ ಪುರಾವೆಗಳೊಂದಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿರಿಸಲಾಗಿದೆ.

ಕಲಾ ವಿಭಾಗಕ್ಕಿಂತ ವಾಣಿಜ್ಯ- ವಿಜ್ಞಾನ ವಿಭಾಗ ಆಯ್ಕೆಯಲ್ಲಿ ಅವಕಾಶ ಜಾಸ್ತಿ:
ವಿದ್ಯಾರ್ಥಿಗೆ ಉತ್ತಮ ಅಂಕವಿದ್ದರೂ ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮ ಉಳಿವಿಗಾಗಿ ವಿಜ್ಞಾನ ವಿಭಾಗ ತಮ್ಮಲ್ಲಿ ಲಭ್ಯವಿಲ್ಲದಿದ್ದಪಕ್ಷದಲ್ಲಿ ಕಲಾ ವಿಭಾಗ ಸೇರುವಂತೆ ಮಾಡಿ ಭವಿಷ್ಯ ಕಮರುವಂತೆ ಮಾಡುವುದನ್ನು ನಾನು ಗಮನಿಸಿದ್ದೇನೆ. ಕಲಾ ವಿಭಾಗಕ್ಕೆ ಭವಿಷ್ಯವಿಲ್ಲವೆಂದಲ್ಲ. ಆದರೆ ವಾಣಿಜ್ಯ ವಿಭಾಗದಲ್ಲಿ ಚಾರ್ಟ್‌ರ್ಡ್ ಎಕೌಂಟೆಂಟ್(ಸಿ.ಎ), ಆಡಿಟ್ ಸಂಬಂಧಿಸಿದ ಕೆಲಸ, ಖಾಸಗಿ ಕಂಪೆನಿಗಳ ಲೆಕ್ಕನಿರ್ವಹಣೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಮೈಕ್ರೋ ಫೈನಾನ್ಸ್‌ಕ್ಷೇತ್ರ ವಿಶಾಲವಾಗಿ ಬೆಳೆಯತ್ತಿದ್ದು ಇಲ್ಲಿ ಹೇರಳ ಅವಕಾಶಗಳಿವೆ. ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉತ್ತಮ ಆಯ್ಕೆಗಳ ಅವಕಾಶವಿರುವುದು ಬಹುತೇಕ ಮಂದಿಗೆ ಮಾಹಿತಿ ಇಲ್ಲ. ಐಟಿಐ, ಡಿಪ್ಲೋಮಾಗಳಂತಹಾ ವಿಷಯ ಆಯ್ಕೆ ಮಾಡಿಕೊಳ್ಳುವವರಿಗೆ ಒಂದೋ ಸ್ವ ಉದ್ಯೋಗ ಅಥವಾ ತಾನು ಕಲಿತ ವಿದ್ಯೆ ಸ್ವ ಬಳಕೆಗೆ ಉಪಯೋಗಕ್ಕೂ ಬರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಹಂಬಲ ಇರುವವರಿಗೆ ಆರ್ಟ್ಸ್‌ನಲ್ಲೂ ಅವಕಾಶಗಳಿದ್ದು ಸಾಮಾನ್ಯ ಜ್ಞಾನ ತಿಳಿದಿರಬೇಕಾಗುತ್ತದೆ. ಕಾನೂನು ಅಭ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರಕಾರದ ವಿವಿಧ ಇಲಾಖೇಗಳ ನೇಮಕಾತಿಗಾಗಿ ಹೋಗುವ ಅಭ್ಯರ್ಥಿಗಳಿಗೆ ಇದು ಅನುಕೂಲವಾಗಬಹುದು. ಆದರೆ ಕಲಾವಿಭಾಗದ ಬಯಸದೆ ಇರುವ ವಿದ್ಯಾರ್ಥಿಗಳನ್ನು ಒತ್ತಾಯದಿಂದ ಆ ಮಾರ್ಗದಲ್ಲಿ ಪ್ರೇರೇಪಿಸಿದರೆ ಅದು ಅವರ ಬಾಳಲ್ಲಿ ಅನುಕೂಲಕ್ಕಿಂತ ಅನಾನುಕೂಲತೆಯೇ ಉಂಟು ಮಾಡುತ್ತದೆ ಎಂಬುದು ಅವರ ಕಾಳಜಿಯ ಮಾತು.

ಫ್ಯಾಮಿಲಿ ಬಗ್ಗೆ:
ಮನೆಯಲ್ಲಿ ತಾಯಿ ರುಕ್ಮಿಣಿ, ಸಹೋದರರಾದ ಬಾಲಕೃಷ್ಣ ಗೌಡ, ವಸಂತ ಗೌಡ ಮತ್ತು ಶೇಖರ ಗೌಡ ಕೃಷಿಯಲ್ಲಿ ತೊಡಗಿದ್ದಾರೆ. ಸಹೋದರಿ ಸರೋಜಿನಿ ಅವರನ್ನು ವಿವಾಹ ಮಾಡಿಕೊಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಪಾಲಡ್ಕ ಮಾಯಿಲೋಡಿಯ ಪ್ರಿಯಾ ಅವರನ್ನು ವರಿಸಿ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಆಕೆಯನ್ನು ಉನ್ನತ ಪದವಿ ಓದಿಸಿ ಪ್ರಸ್ತುತ ಬೆಂಗಳೂರಿನಲ್ಲೇ ಖಾಸಗಿ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿಯಾಗುವಂತೆ ಮಾಡಿದ್ದಾರೆ. ದಂಪತಿಯ ಏಕೈಕ ಪುತ್ರ ಅನುಪ್ರೀತ್ ಪ್ರಥಮ ತರಗತಿಯಲ್ಲಿ ಓದುತ್ತಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.